2026-06-25 03:42:38

Women found to be consuming more drugs | ರಾಜ್ಯದ ಎಲ್ಲಾ ಜೈಲುಗಳಲ್ಲಿ ಡ್ರಗ್ಸ್ ಟೆಸ್ಟ್ ಮಹಿಳೆಯರೇ ಹೆಚ್ಚು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆ | Speed News Kannada

Women found to be consuming more drugs | ರಾಜ್ಯದ ಎಲ್ಲಾ ಜೈಲುಗಳಲ್ಲಿ ಡ್ರಗ್ಸ್ ಟೆಸ್ಟ್ ಮಹಿಳೆಯರೇ ಹೆಚ್ಚು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆ | Speed News Kannada

ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳ ಜೈಲುಗಳಲ್ಲಿ ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯರ ಪರೀಕ್ಷೆ ವೇಳೆ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಅದರಲ್ಲೂ ಹೆಚ್ಚಾಗಿ ಮಹಿಳಾ ಕೈದಿಗಳ ಸೇವನೆ ಮಾಡಿರುವುದು ಪತ್ತೆಯಾಗಿದೆ. ಹೌದು ರಾಜ್ಯದ ಎಲ್ಲಾ ಜೈಲಿನಲ್ಲಿ ಅಧಿಕಾರಿಗಳು ಡ್ರಗ್ಸ್ ಟೆಸ್ಟ್ ನಡೆಸುತ್ತಿದ್ದಾರೆ.ಜೈಲಿನ ವೈದ್ಯರಿಗೆ ಡ್ರಗ್ಸ್ ಟೆಸ್ಟ್ ಕೊಟ್ಟು ಕೈದಿಗಳಿಗೆ ಟೆಸ್ಟ್ ನಡೆಸಲಾಗುತ್ತಿದೆ. ಸದ್ಯ ಪಾಸಿಟಿವ್ ಬಂದಿರುವ ಕೈದಿಗಳಿಗೆ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವ್ಯಸನದ ಮಟ್ಟ ಎಷ್ಟು ಇದೆ ಎಂದು ತಿಳಿಯಲು ಸ್ಯಾಂಪಲ್ಸ್ ಗಳನ್ನು ರವಾನಿಸಲಾಗಿದೆ. ನಿಮ್ಹಾನ್ಸ್ ನಿಂದ ವರದಿ ಬಂದ ನಂತರ ವ್ಯಸನದ ಮಟ್ಟ ನೋಡಿ ಚಿಕಿತ್ಸೆ ನೀಡಲಾಗುತ್ತದೆ.
ವಿಚಾರಣಾಧೀನ ಕೈದಿಗಳಲ್ಲಿ ಮಾದಕ ವ್ಯಸನ ಹೆಚ್ಚಾಗಿ ಕಂಡುಬಂದಿದೆ. ಟೆಸ್ಟ್ ವೇಳೆ ವಿಚಾರಣಾ ಧನ ಕೈದಿಗಳಲ್ಲಿ ಹೆಚ್ಚು ಪಾಸಿಟಿವ್ ಬಂದಿದೆ. ಸಜಾ ಕೈದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಸನ ಕಂಡುಬಂದಿಲ್ಲ. ಯೂರಿನ್ ಸ್ಯಾಂಪಲ್ ಶೇಕರಣೆ ವೇಳೆ ಮಹಿಳಾ ಕೈದಿಗಳು ಕಳ್ಳಾಟ ನಡೆಸಿದ್ದಾರೆ. ಯೂರಿನ್ ಬದಲಿಗೆ ನೀರು ಮಿಶ್ರಣ ಮಾಡಿ ಕೊಟ್ಟಿರುವುದು ಇದೀಗ ಬೆಳಗೆಗೆ ಬಂದಿದೆ. ಸದ್ಯ ಯೂರಿನ್ ಸ್ಯಾಂಪಲ್ ಪಡೆದು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.
ಕೈದಿಗಳ ಬಳಿ ಸ್ಯಾಂಪಲ್ ಕೇಳಿದಾಗ ನಾವು ಯಾಕೆ ಕೊಡಬೇಕು ಎಂದು ಪ್ರಶ್ನೆ ಕೇಳಿದ್ದಾರೆ. ಒತ್ತಾಯ ಮಾಡಿದಾಗ ನೀರು ಮಿಶ್ರಣ ಮಾಡಿ ಕೊಟ್ಟಿರುವ ಕೈದಿಗಳು ಎಂದು ತಿಳಿದುಬಂದಿದೆ. ಹೀಗಾಗಿ ನಿರ್ದಿಷ್ಟ ಡ್ರಗ್ಸ್ ಸಂಖ್ಯೆ ಪತ್ತೆಯಾಗಿಲ್ಲ. ಸದ್ಯ ಶೇಕಡ 10 ರಷ್ಟು ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ ಹಂತ ಹಂತವಾಗಿ ಮುಂದೆ ಎಲ್ಲರಿಗೂ ಪರೀಕ್ಷೆ ಮಾಡಲು ಜೈಲು ವೈದ್ಯರು ತಯಾರಿ ಮಾಡಿಕೊಂಡಿದ್ದಾರೆ.
ಸದ್ಯ ಒಟ್ಟು ಐದು ಮಾದರಿಯ ಮಾದಕ ವಸ್ತುಗಳ ಪರೀಕ್ಷೆ ಮಾಡುತ್ತಿದ್ದಾರೆ. ಎಂ ಡಿ ಎಂ ಎ, ಗಾಂಜಾ, ಹೆರಾಯಿನ್ ಮತ್ತು ಕೊಕೆನ್ ಸೇರಿದಂತೆ ಒಟ್ಟು ಐದು ಮಾದರಿಯ ಡ್ರಗ್ಸ್ ಸೇವನೆ ಕುರಿತು ಕೈದಿಗಳಿಗೆ ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರು ಮೈಸೂರು ಜೈಲಿನಲ್ಲಿ ಎಲ್ಲಾ ಮಾದರಿಯ ಡ್ರಗ್ಸ್ ಪರೀಕ್ಷೆ ನಡೆಸಲಾಗುತ್ತಿದೆ. ಉಳಿದ ಜೈಲುಗಳಲ್ಲಿ ಗಾಂಜ ಸೇವನೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.