2026-03-07 12:26:35

Will Darshan be Released in March? Rachita Ram is Waiting | ಮಾರ್ಚ್‌ಲ್ಲಿ ಬಿಡುಗಡೆ ಆಗ್ತಾರಾ ದರ್ಶನ್? ಆ ದಿನ ಯಾವಾಗ ಬರುತ್ತೋ ಎಂದ ರಚಿತಾ ರಾಮ್! | Speed News Kannada

Will Darshan be Released in March? Rachita Ram is Waiting |  ಮಾರ್ಚ್‌ಲ್ಲಿ ಬಿಡುಗಡೆ ಆಗ್ತಾರಾ ದರ್ಶನ್? ಆ ದಿನ ಯಾವಾಗ ಬರುತ್ತೋ ಎಂದ ರಚಿತಾ ರಾಮ್! | Speed News Kannada

ದರ್ಶನ್ (Actor Darshan).. ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ. 2ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿ ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಊಟ ಸೇರ್ತಿಲ್ಲ. ಇದರ ಮಧ್ಯೆ, ದರ್ಶನ್ ಫ್ಯಾನ್ಸ್‌ ಗೆ ಸಿಹಿಸುದ್ದಿ ಸಿಗೋ ಲಕ್ಷಣ ಕಾಣಿಸುತ್ತಿವೆ.ಮಾರ್ಚ್ ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ. ಈ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ಕೂಡ ಈ ವಿಚಾರವನ್ನು ಈಗಷ್ಟೇ ಕೇಳಿಪಟ್ಟೆ. ದರ್ಶನ್ ಸರ್ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂಬ ಸುದ್ದಿ ನಿಜವಾದರೆ ನಾನು ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ. ಅವರ ಬರುವಿಕೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.
ನಾವು ಭೇಟಿಯಾದಾಗಲೆಲ್ಲಾ ಹೆಚ್ಚಾಗಿ ಸಿನಿಮಾಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆವು. ಅವರ ದೊಡ್ಡ ಗುಣವೇ ಅದು. ಮುಂದಿನ ದಿನಗಳಲ್ಲಿ ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ಆಸೆ ನನಗಿದೆ' ಎಂದು ರಚಿತಾ ರಾಮ್ ಭರವಸೆ ವ್ಯಕ್ತಪಡಿಸಿದ್ದಾರೆ.ಜೈಲಲ್ಲಿ ಅಧಿಕಾರಿಗಳ ಕಳ್ಳಾಟ ಬಯಲು!
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ.
ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, 'ನನಗೆ ನಟ ದರ್ಶನ್ ಅವರನ್ನು ನೋಡಬೇಕು, ತೋರಿಸಿ' ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್ ಬಳಿ ಕರೆದೊಯ್ದಿದ್ದಾರೆ.ಜನವರಿ 26 ರಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, 'ಯಾರೋ ಖಾಕಿ ಬಟ್ಟೆ ಹಾಕಿಕೊಂಡವರು ಬಂದು ನನ್ನನ್ನು ನೋಡಿ ಹೋದರು' ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಡಿಜಿಪಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸರ ಈ ಕಳ್ಳಾಟ ಬಯಲಾಗಿದೆ.
ವಾರ್ಡನ್ ಚಾಮರಾಜನಗರಕ್ಕೆ ವರ್ಗಾವಣೆ
ಸದ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೇದೆಯ ಚಲನವಲನ ಹಾಗೂ ವಾರ್ಡರ್ ಪ್ರಭಾಕರ್ ಆತನಿಗೆ ಸಹಾಯ ಮಾಡುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ವಾರ್ಡರ್ ಪ್ರಭಾಕರ್ ಚೌಹಾನ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.