2026-06-08 04:27:32

ತಮಿಳುನಾಡು ಸಿಎಂ ವಿಜಯ್‌ ಸದಾ ಕಪ್ಪು ಕೋಟು ಬಿಳಿ ಅಂಗಿ ಧರಿಸುವುದೇಕೆ ಗೊತ್ತೇ?|Speed News Kannada

ತಮಿಳುನಾಡು ಸಿಎಂ ವಿಜಯ್‌ ಸದಾ ಕಪ್ಪು ಕೋಟು ಬಿಳಿ ಅಂಗಿ ಧರಿಸುವುದೇಕೆ ಗೊತ್ತೇ?|Speed News Kannada

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಸದಾ ಕಪ್ಪು ಬಿಳುಪಿನ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ಬಣ್ಣಗಳ ಆಯ್ಕೆ ಚರ್ಚೆಗೂ ಗ್ರಾಸವೊದಗಿಸಿದೆ.  ಮೇ 10ರಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಳಿ ಅಂಗಿ, ಕಪ್ಪು ಕೋಟ್ ಮತ್ತು ಪ್ಯಾಂಟ್ ಧರಿಸಿ ಗಮನ ಸೆಳೆದಿದ್ದರು. ಅಂದಿನಿಂದಲೂ ಅವರ ವಸ್ತ್ರ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈ ಸಂಬಂಧ ಹಲವು ರೀತಿಯ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.

ಹಲವು ದಶಕಗಳಿಂದ ದ್ರಾ ಕಪ್ಪು ಬಣ್ಣ ದ್ರಾವಿಡ ಚಳವಳಿಯ ಸಂಕೇತವಾಗಿ ಹೊರಹೊಮ್ಮಿದೆ. ಪ್ರತಿಭಟನೆ, ವೈಚಾರಿಕತೆ, ಸಾಮಾಜಿಕ ನ್ಯಾಯ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ನಿಲುವನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ಕಪ್ಪು ವಸ್ತ್ರ ಧರಿಸುವುದರ ಹಿಂದೆ 'ಪೆರಿಯಾರ್' ಎಂದೇ ಜನಪ್ರಿಯರಾಗಿದ್ದ ಹಾಗೂ 'ದ್ರಾವಿಡ ಕಳಗಂ' ಸ್ಥಾಪಕ ಇ.ವಿ. ರಾಮಸಾಮಿ ಅವರೂ ಕಪ್ಪು ಂಗಿಯನ್ನೇ ತೊಡುತ್ತಿದ್ದರು. ಜಾತಿ ಹಾಗೂ ಸಾಮಾಜಿಕ ತಾರತಮ್ಯ, ಮೌಡ್ಯಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಅಂಗಿ ಧರಿಸುವಂತೆ ಪೆರಿಯಾರ್ ಅವರು 1945ರಲ್ಲಿ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು ಎಂದು ವರದಿಗಳು ಹೇಳುತ್ತಿವೆ.

ಸುಮಾರು 60 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ (ಎಐಎಡಿಎಂಕೆ) ಪಕ್ಷಗಳಿಗೆ ತಮ್ಮ ನೇತೃತ್ವದ ಟಿವಿಕೆ ಭಿನ್ನ ಎಂಬುದನ್ನು ತೋರಿಸಲು ವಿಜಯ್ ಇಂತಹ ಪ್ರಯತ್ನ ಮಾಡಿರಬಹುದು. ಟಿವಿಕೆಯು ದ್ರಾವಿಡ ಸಿದ್ಧಾಂತಗಳಿಗೆ ಬದ್ಧವಾಗಿದೆ ಎಂಬುದನ್ನು ಪ್ರತಿಪಾದಿಸಲೂ ಅವರು ಕಪ್ಪು ಬಣ್ಣವನ್ನು ಆರಿಸಿಕೊಂಡಿರಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.