2026-06-06 11:23:38

ಸಿಇಟಿ ಫಲಿತಾಂಶ ಪ್ರಕಟ: ಇವರೇ ಟಾಪರ್ಸ್‌ |Speed News Kannada

ಸಿಇಟಿ ಫಲಿತಾಂಶ ಪ್ರಕಟ: ಇವರೇ ಟಾಪರ್ಸ್‌ |Speed News Kannada

ಬೆಂಗಳೂರು: ಇಂದು ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, 2,92,782 ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಎಂಜಿನಿಯರಿಂಗ್‌, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತು.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಏಪ್ರಿಲ್ 22, 23, 24ರಂದು ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. ರಾಜ್ಯಾದ್ಯಂತ ಒಟ್ಟು 1,86,099 ವಿದ್ಯಾರ್ಥಿನಿಯರು ಹಾಗೂ 1,44,380 ಸೇರಿ 3,36,000 ಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಇಂದು ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ ಫಲಿತಾಂಶ ವೀಕ್ಷಿಸಬಹುದು.

https://keaonline.karnataka.gov.in/ugcet_2026_resultshttps://keaonline.karnataka.gov.in/ugcet_2026_result ಹಾಗೂ https://cetonline.karnataka.gov.in/kea ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ವಿಷಯಗಳಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ಪ್ರಶ್ನೆಗಳ ಬಗ್ಗೆ ಗೊಂದಲ ಉಂಟಾಗಿದ್ದರಿಂದ, ಎಲ್ಲ ವಿದ್ಯಾರ್ಥಿಗಳಿಗೆ 1 ಗ್ರೇಸ್ ಮಾರ್ಕ್ ನೀಡಲಾಗಿದೆ. ಇದರಿಂದ ಹಲವು ವಿದ್ಯಾರ್ಥಿಗಳ ಅಂಕ ಹಾಗೂ ರ‍್ಯಾಂಕ್‌ನಲ್ಲಿ ಸ್ವಲ್ಪ ಲಾಭವಾಗುವ ಸಾಧ್ಯತೆ ಇದೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಪದವಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಸಿಇಟಿ ರ‍್ಯಾಂಕ್ ಮುಖ್ಯ ಪಾತ್ರ ವಹಿಸುತ್ತದೆ.

ಇವರೇ ಟಾಪರ್ಸ್​!

ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲನೇ ರ‍್ಯಾಂಕ್‌ ಅನ್ನು ಬೆಂಗಳೂರಿನ ತನಿಶಾ ಕಾರ್ತಿಕ್, ಎರಡನೇ ಸೃಜನ್ ರ‍್ಯಾಂಕ್‌ ಅನ್ನು ಹಾಗೂ ಮೂರನೇ ರ‍್ಯಾಂಕ್‌ ಅನ್ನು ನಿನಾದ್ ಗಳಿಸಿದ್ದಾರೆ.

ಕೃಷಿ ವಿಭಾಗದಲ್ಲಿ ಆರ್.ವಿ ಪಿಯು ಕಾಲೇಜ್‌  ವಿದ್ಯಾರ್ಥಿ ನಿನಾದ್ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಧಾರವಾಡದ ಅರ್ಜುನ್ ಸೈನ್ಸ್ ಕಾಲೇಜಿನ ಅನ್ಮೊಲ್ ಪಡೆದಿದ್ದಾರೆ. ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಮಯ್ ಎ.ಎಸ್ ತೃತೀಯ ಸ್ಥಾನ ಗಳಿಸಿದ್ದಾರೆ.

ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ನಯನ ಗೋಪಿ ಪ್ರಥಮ ಸ್ಥಾನ, ದಾವಣಗೆರೆಯ ಸರ್ ಎಂವಿ ಪಿಯು ಕಾಲೇಜಿನ ಅಮೂಲ್ಯ ದ್ವಿತೀಯ ಸ್ಥಾನ ಹಾಗೂ ದಾವಣಗೆರೆಯ ಶ್ರೀ ಚೈತನ್ಯ ಪಿಯು ಕಾಲೇಜಿನ ಸುಚಿತಾ ತೃತೀಯ ಸ್ಥಾನ ಗಳಿಸಿದ್ದಾರೆ.

ಡಿ-ಫಾರ್ಮ ವಿಭಾಗದಲ್ಲಿ ನಯನ ಗೋಪಿ ಪ್ರಥಮ, ಅಮೂಲ್ಯ ದ್ವಿತೀಯ, ಸುಚಿತಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕೆಇಎ ಮಾಹಿತಿ ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.