2026-06-08 01:29:33

Why did Rashmika say this | ಸಾಮಿ ಸಾಮಿ ಹಾಡಿಗೆ ಕುಣಿದು ಸೊಂಟ ಬಿದ್ದೋಗಿದೆ ರಶ್ಮಿಕಾ ಹೀಗೆ ಹೇಳಿದ್ದೇಕೆ | Speed News Kannada

Why did Rashmika say this | ಸಾಮಿ ಸಾಮಿ ಹಾಡಿಗೆ ಕುಣಿದು ಸೊಂಟ ಬಿದ್ದೋಗಿದೆ ರಶ್ಮಿಕಾ ಹೀಗೆ ಹೇಳಿದ್ದೇಕೆ | Speed News Kannada

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಈಗ ಶ್ರೀಮತಿ ಆಗಿದ್ದಾರೆ. ಬಹು ವರ್ಷಗಳ ಗೆಳೆಯ ವಿಜಯ ದೇವರಕೊಂಡ ಅವರ ಸಂಗಾತಿಯಾಗಿದ್ದು ದಾಂಪತ್ಯ ಜೀವನ ಶುರುಮಾಡಿದ್ದಾರೆ. ಇವರಿಬ್ಬರ ಫೋಟೋ ಕ್ಲಿಕ್ಸ್ ನಲ್ಲಿ ಇದಾಗಲೇ ದಾಖಲೆ ಬರೆದಿರುವುದು ಗೊತ್ತೇ ಇದೆ. 'ಸಾಮಿ ಸಾಮಿ'. ಪುಷ್ಪಾ' ಸಿನಿಮಾ ಅಂತೂ ಸೂಪರ್ ಹಿಟ್ ಆಯಿತು. ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿತ್ತು. ರಶ್ಮಿಕಾ ಮಂದಣ್ಣ ಅವರೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 
ಅಭಿಮಾನಿಯೊಬ್ಬರು ನಾನು ನಿಮ್ಮೊಂದಿಗೆ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದರು. ಅದಕ್ಕೆ ರಶ್ಮಿಕಾ, ಅದು ಸಾಧ್ಯವೇ ಇಲ್ಲ, ನಾನು ಇನ್ನುಮುಂದೆ ಈ ನೃತ್ಯ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ಅವರು, 'ನಾನು ಈಗಾಗಲೇ ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿಯಾಗಿದೆ, ಅಲ್ಲದೆ ಈ ಹಾಡಿಗೆ ನಾನು ಎಷ್ಟು ಬಾರಿ ನೃತ್ಯ ಮಾಡಿದ್ದೇನೆ ಎಂದರೆ ಈಗಾಗಲೇ ಸೊಂಟ ಬಿದ್ದು ಹೋಗಿದೆ ಎಂದು ಉತ್ತರಿಸಿದ್ದಾರೆ.
ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಕಾಣಿಸಬಹುದು, ಅಷ್ಟು ಕುಣಿದಿದ್ದೇನಿ. ಅದಕ್ಕೆ ಇನ್ಮುಂದೆ ಜಪ್ಪಯ್ಯ ಎಂದರೂ ಇದಕ್ಕೆ ಡಾನ್ಸ್ ಮಾಡಲ್ಲ' ಎಂದು ಚಟಾಕಿ ಹಾರಿಸಿದ್ದರು. ಮದುವೆಯಾದ ಮೇಲೆ ಸೊಂಟ ಬಿದ್ದು ಹೋದ್ರೆ ಕಷ್ಟನಪ್ಪ ಎಂದು ಆಗ ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಇದೀಗ ನಟಿ ಮದುವೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅದು ಮುನ್ನೆಲೆಗೆ ಬಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.