2026-04-28 05:46:16

White House shooting, official complaint filed against shooter|ವೈಟ್ ಹೌಸ್‌ನಲ್ಲಿ ಗುಂಡಿನ ದಾಳಿ, ಶೂಟರ್‌ ವಿರುದ್ಧ ಅಧಿಕೃತ ದೂರು|Speed News Kannada

White House shooting, official complaint filed against shooter|ವೈಟ್ ಹೌಸ್‌ನಲ್ಲಿ ಗುಂಡಿನ ದಾಳಿ, ಶೂಟರ್‌ ವಿರುದ್ಧ ಅಧಿಕೃತ ದೂರು|Speed News Kannada

ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆಯುತ್ತಿದ್ದ ವೈಟ್ ಹೌಸ್ ಪತ್ರಿಕಾ ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿಯ ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ದಾಳಿಯ ಆರೋಪಿ, 31 ವರ್ಷದ ಕ್ಯಾಲಿಫೋರ್ನಿಯಾ ಮೂಲದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ‘ಅಧ್ಯಕ್ಷರ ಹತ್ಯೆಯ ಯತ್ನ’ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆರೋಪಿ ಅಲೆನ್, ಅತ್ಯುನ್ನತ ಶಿಕ್ಷಣ ಪಡೆದಿದ್ದರೂ ಇಂತಹ ಕೃತ್ಯಕ್ಕೆ ಕೈಹಾಕಿರುವುದು ತನಿಖಾಧಿಕಾರಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲೆನ್ ಒಬ್ಬ ವಿಡಿಯೋ ಗೇಮ್ ಡೆವಲಪರ್ ಆಗಿದ್ದು, ದಾಳಿಗೂ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ್ದ ಪ್ರಣಾಳಿಕೆಯಲ್ಲಿ ತನ್ನನ್ನು ತಾನು ‘ಫ್ರೆಂಡ್ಲಿ ಫೆಡರಲ್ ಅಸಾಸಿನ್’ ಎಂದು ಕರೆದುಕೊಂಡು, ಟ್ರಂಪ್ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದನು.

ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್‌ಗೆ ರೈಲಿನಲ್ಲಿ ಬಂದಿದ್ದ ಅಲೆನ್, ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗುಂಡು ತಗುಲಿದ್ದರೂ, ಅವರು ಧರಿಸಿದ್ದ ಬುಲೆಟ್ ಪ್ರೂಫ್ ಜಾಕೆಟ್‌ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಗಂಭೀರ ಅಪರಾಧಗಳು ಸಾಬೀತಾದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.