2026-06-08 06:52:29

When will the war end | ಯುದ್ಧ ಯಾವಾಗ ಕೊನೆಗೊಳ್ಳಲಿದೆ ಟ್ರಂಪ್‌ ಹೇಳಿದ್ದೇನು | Speed News Kannada

When will the war end | ಯುದ್ಧ ಯಾವಾಗ ಕೊನೆಗೊಳ್ಳಲಿದೆ ಟ್ರಂಪ್‌ ಹೇಳಿದ್ದೇನು | Speed News Kannada

ವಾಷಿಂಗ್ಟನ್:‌ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಗಂಭೀರ ಹಂತ ತಲುಪುತ್ತಿರುವ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈ ಯುದ್ಧವು ಸದ್ಯಕ್ಕೆ ಮುಗಿಯುವುದಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಅವರು, ಈ ಯುದ್ಧವು ಕನಿಷ್ಠ ನಾಲ್ಕು ವಾರಗಳ ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇರಾನ್‌ ಮಾತುಕತೆಗೆ ಒಪ್ಪಿಕೊಂಡರೆ  ಸಾವು ನೋವುಗಳು ಕಡಿಮೆಯಾಗುವ ಸಾಧ್ಯತೆಗಳವೆ. ಖಮೇನಿ ಸೇರಿದಂತೆ ಅವರ ತಂಡವನ್ನು ಹತ್ಯೆ ಮಾಡಲಾಗಿದೆ. ಆರಂಭಿಕ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇಸ್ಲಾಮಿಕ್ ಗಣರಾಜ್ಯದ ಆಡಳಿತದ ಸುಮಾರು 40 ಸದಸ್ಯರು ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.
ಇರಾನ್ ಅನ್ನು ಯಾರು ಮುನ್ನಡೆಸಲು ಬಯಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ನನ್ನ ಬಳಿ ಮೂರು ಆಯ್ಕೆಗಳಿವೆ, ಆದರೆ ಈಗ ನಾನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ಕಳೆದ 36 ಗಂಟೆಗಳಲ್ಲಿ, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡೆಸಿದ ಸಶಸ್ತ್ರ ದಾಳಿಗಳು ಇರಾನ್ ಅನ್ನು ಧ್ವಂಸಗೊಳಿಸಲಾಗಿದೆ. ಈ ಯುದ್ಧ ಕೇವಲ ಅಧಿಕಾರಕ್ಕಾಗಿ ಅಲ್ಲ, ನ್ಯಾಯ ಮತ್ತು ಭದ್ರತೆಗಾಗಿ ಹೋರಾಟ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.