2026-06-08 04:57:23

what is the meaning of bl santosh tweet? | ಬಿ ಎಲ್‌ ಸಂತೋಷ್‌ ಅವರ ಆ ಟ್ವೀಟ್‌ ನ ಒಳಾರ್ಥ ಏನು?; ಬಿಜೆಪಿ ಉದ್ದೇಶವಾದರೂ ಏನು?| Speed News Kannada

what is the meaning of bl santosh tweet? | ಬಿ ಎಲ್‌ ಸಂತೋಷ್‌ ಅವರ ಆ ಟ್ವೀಟ್‌ ನ ಒಳಾರ್ಥ ಏನು?; ಬಿಜೆಪಿ ಉದ್ದೇಶವಾದರೂ ಏನು?| Speed News Kannada

ನವದೆಹಲಿ: ತಮಿಳುನಾಡಿನಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಅತಂತ್ರ ಫಲಿತಾಂಶದ ಕಾರಣ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. 108 ಸ್ಥಾನಗಳನ್ನು ಗಳಿಸಿರುವ ವಿಜಯ್ ಅವರಿಗೆ ಕಾಂಗ್ರೆಸ್‌ ತನ್ನ ಐದು ಶಾಸಕರ ಬೆಂಬಲ ಘೋಷಿಸಿದೆ. ಇನ್ನೂ ಏಳು ಶಾಸಕರ ಕೊರತೆ ಉಂಟಾಗಿದ್ದು, ವಿಜಯ್‌ ಎಡಪಕ್ಷಗಳ ಜತೆ ಮಾತುಕತೆ ಮುಂದುವರೆಸಿದ್ದಾರೆ.

ಮತ್ತೊಂದು ಕಡೆ ದಶಕಗಳ ಕಳಾದ ಬದ್ಧ ವೈರಿಗಳಾದ ಡಿಎಂಕೆ -ಎಐಎಡಿಎಂಕೆ ಕೈ ಜೋಡಿಸಬಹುದು ಎಂಬ ವದಂತಿಗಳೂ ಹರಿದಾಡುತ್ತಿವೆ. ಈ ಬೆಳವಣಿಗೆಗಳ ನಡುವೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಮಾಡಿರುವ ಟ್ವೀಟ್‌ ಈ ಚರ್ಚೆಗೆ ಮತ್ತಷ್ಟು ಗ್ರಾಸವೊದಗಿಸಿದೆ.

 ಎಕ್ಸ್‌ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು “ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಆದರೆ ಒಂದು ವಿಷಯ ಖಚಿತ. ಕಾಂಗ್ರೆಸ್ ಕೊನೆಯಲ್ಲಿ ಮುಖಕ್ಕೆ ಮೊಟ್ಟೆಯಲ್ಲಿ ಹೊಡೆಸಿಕೊಂಡಂತಾಗುತ್ತೆ” ಎಂದು ಹೇಳಿದ್ದಾರೆ.

ಅವರ ಈ ಹೇಳಿಕೆ ನಾನಾ ಅರ್ಥಗಳನ್ನು ನೀಡುತ್ತಿದೆ. ಕಾಂಗ್ರೆಸ್‌ ಬೆಂಬಲದೊಂದಿಗೆ ಟಿವಿಕೆ ಕಾಂಗ್ರೆಸ್‌ ರಚಿಸಬಾರದು ಎನ್ನುವುದು ಮುಖ್ಯ ಅಂಶ. ಕಾಂಗ್ರೆಸ್ ಸರ್ಕಾರದಲ್ಲಿ ಭಾಗಿಯಾಗಬಾರದು ಎನ್ನುವ ಅಭಿಪ್ರಾಯವೂ ಬಿಜೆಪಿಗಿದೆ ಎನ್ನಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.