2026-06-08 01:26:41

What did Kiara Advani say about the movie Toxic | ಟಾಕ್ಸಿಕ್ ಚಿತ್ರದ ಬಗ್ಗೆ ಕಿಯಾರಾ ಅಡ್ವಾಣಿ ಹೇಳಿದ್ದೇನು | Speed news kannada

What did Kiara Advani say about the movie Toxic | ಟಾಕ್ಸಿಕ್ ಚಿತ್ರದ ಬಗ್ಗೆ ಕಿಯಾರಾ ಅಡ್ವಾಣಿ ಹೇಳಿದ್ದೇನು | Speed news kannada

ಯಶ್‌ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾ ಇದೀಗ ಜೂನ್ 4ಕ್ಕೆ ಬಿಡುಗಡೆ ಮುಂದೂಡಿಕೊಂಡಿದ್ದು, ಸಿನಿಮಾದ ಪ್ರಚಾರ ಇದೀಗ ನಿಧಾನಕ್ಕೆ ಆರಂಭವಾಗಿದೆ.  ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹಳ ಪ್ರಶ್ನೆಗಳು ಎದುರಾಗಿದ್ದು, ಯಶ್ ಸಹ ‘ಟಾಕ್ಸಿಕ್’ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೀಗ ಪ್ರತಿಷ್ಠಿತ ಬ್ರ್ಯಾಂಡ್ ಕೊಲ್ಯಾಬರೇಷನ್​​ನಲ್ಲಿ ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೆ ಬ್ರ್ಯಾಂಡ್ ಶೂಟ್ ಒಂದರಲ್ಲಿ ಭಾಗವಹಿಸಿದ್ದ ಕಿಯಾರಾ ಅಡ್ವಾಣಿ, ತಮ್ಮ ಸಿನಿಮಾ, ಖಾಸಗಿ ಜೀವನ, ತಾಯ್ತನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಅವರ ನಾಡಿಯಾ ಪಾತ್ರ ಬಹಳ ಭಿನ್ನವಾದ ಮತ್ತು ಸವಾಲಿನ ಪಾತ್ರ ಹಾಗೂ ಅದು ಮಾಸ್ ಮಸಾಲ ಸಿನಿಮಾದ ನಾಯಕಿಯ ಪಾತ್ರದಂತೆ ಖಂಡಿತ ಇಲ್ಲ ಎಂಬುದು ತಿಳಿಯುತ್ತಿದೆ. ‘ನನ್ನ ವೃತ್ತಿ ಜೀವನದಲ್ಲಿ ನಾನು ಸವಾಲುಗಳನ್ನು ತೆಗೆದುಕೊಳ್ಳಲು ರೆಡಿಯಾಗುತ್ತಿರುವಾಗಲೇ ಈ ಪಾತ್ರ ನನಗೆ ಬಂತು. ಇದು ಸರಿಯಾದ ಸಮಯ ಎನಿಸಿ ಈ ಪಾತ್ರವನ್ನು ನಾನು ಒಪ್ಪಿಕೊಂಡೆ. ನಾನು ‘ನಾಡಿಯಾ’ ಅಂಥಹಾ ಸವಾಲಿನ ಪಾತ್ರದಲ್ಲಿ ಬೆರೆತು ಹೋದೆ, ನನ್ನನ್ನು ನಾನು ನಿರ್ದೇಶಕಿಗೆ ಮತ್ತು ಆ ಪಾತ್ರಕ್ಕೆ ಒಪ್ಪಿಸಿಕೊಂಡು ಬಿಟ್ಟೆ. ಪಾತ್ರ ಚೆನ್ನಾಗಿ ಮೂಡಿಬಂದಿದ್ದು, ಸಿನಿಮಾ ಬಿಡುಗಡೆಗೆ ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ ಕಿಯಾರಾ ಅಡ್ವಾಣಿ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.