2026-06-08 02:43:02

What are the terms the US has set for Israel | ಕೊನೆಗೂ ಯುದ್ಧ ಅಂತ್ಯಗೊಳಿಸಲು ಇರಾನ್ ಮುಂದು ಆದ್ರೆ ಅಮೆರಿಕ ಇಸ್ರೇಲ್ ಗೆ ಹಾಕಿದ ನಿಯಮಗಳೇನು | Speed News Kannada

What are the terms the US has set for Israel | ಕೊನೆಗೂ ಯುದ್ಧ ಅಂತ್ಯಗೊಳಿಸಲು ಇರಾನ್ ಮುಂದು ಆದ್ರೆ ಅಮೆರಿಕ ಇಸ್ರೇಲ್ ಗೆ ಹಾಕಿದ ನಿಯಮಗಳೇನು | Speed News Kannada

ಅಮೆರಿಕ ಮತ್ತು ಇಸ್ರೇಲ್ ಜೊತೆಗೆ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮೂರು ಷರತ್ತುಗಳನ್ನು ಹಾಕಿದೆ. ಯಾವುದೇ ನಿರ್ಣಯವು ಇರಾನ್‌ ನ ಕಾನೂನುಬದ್ದ ಹಕ್ಕುಗಳನ್ನು ಗುರುತಿಸಬೇಕು ಮತ್ತು ದೇಶವು ಭವಿಷ್ಯದ ದಾಳಿಯನ್ನು ಎದುರಿಸುವುದಿಲ್ಲ ಎಂದು ಖಾತರಿಪಡಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೆಜೆಶ್ಚಿಯಾನ್ ಯುದ್ಧದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡುತ್ತಾ, ಈ ಪ್ರದೇಶದಲ್ಲಿ ಶಾಂತಿಗಾಗಿ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ. ಯಹೋದಿಗಳ ಆಡಳಿತದ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ಪರಿಹಾರ ನೀಡುವುದು ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ದೃಢವಾದ ಅಂತಾರಾಷ್ಟ್ರೀಯ ಖಾತ್ರಿಯನ್ನು ಒದಗಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಅಮೆರಿಕ ಒಂದು ವೇಳೆ ಇರಾನ್ ಬಂದರು ಮೇಲೆ ದಾಳಿ ಮಾಡಿದರೆ ಪರ್ಷಿಯನ್ ಕೊಲ್ಲಿಯಲ್ಲಿ ಯಾವುದೇ ಬಂದರು, ಆರ್ಥಿಕ ಕೇಂದ್ರ ಅಥವಾ ಸ್ಥಳದ ಮೇಲೆ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಇರಾನ್‌ ನ ಸಶಸ್ತ್ರ ಪಡೆಗಳ ವಕ್ತಾರ ಅಬೋಲ್‌ಫಜಲ್ ಶೆಕಾರ್ಚಿ, ಸರ್ಕಾರಿ ಸುದ್ದಿಸಂಸ್ಥೆ IRIB ಗೆ ಹೇಳಿಕೆ ನೀಡಿದ ನಂತರ ಪೆಜೆಶ್ಚಿಯಾನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.