2026-07-23 12:27:09

Water Board Good News for Bengaluru Residents|ಬೆಂಗಳೂರು ನಿವಾಸಿಗಳಿಗೆ ಜಲಮಂಡಳಿ ಗುಡ್ ನ್ಯೂಸ್|Speed News Kannada

Water Board Good News for Bengaluru Residents|ಬೆಂಗಳೂರು ನಿವಾಸಿಗಳಿಗೆ ಜಲಮಂಡಳಿ ಗುಡ್ ನ್ಯೂಸ್|Speed News Kannada

ಬೆಂಗಳೂರಿನ ಜನತೆಗೆ ಜಲಮಂಡಳಿ ಒಂದು ಮಹತ್ವದ ಸಿಹಿ ಸುದ್ದಿ ನೀಡಿದೆ. ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದ ಗ್ರಾಹಕರಿಗಾಗಿ 'ಒನ್ ಟೈಮ್ ಸೆಟಲ್‌ಮೆಂಟ್' ಅಥವಾ OTS ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಾಕಿ ಇರುವ ಬಿಲ್ ಮೊತ್ತವನ್ನು ಬಡ್ಡಿ ರಹಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪಾವತಿಸಲು ಸುವರ್ಣಾವಕಾಶ ಕಲ್ಪಿಸಲಾಗಿದೆ.ಜಲಮಂಡಳಿಯ ಅಂಕಿಅಂಶಗಳ ಪ್ರಕಾರ, ನಗರದ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು 851.33 ಕೋಟಿ ರೂಪಾಯಿ ಬಾಕಿ ಇದ್ದು, ಇದರಲ್ಲಿ ಅಸಲು 539 ಕೋಟಿ ಹಾಗೂ ಬಡ್ಡಿಯೇ 311 ಕೋಟಿ ರೂಪಾಯಿಗಳಷ್ಟಿದೆ. ಈ ಬಡ್ಡಿಯ ಹೊರೆಯನ್ನು ಕಡಿಮೆ ಮಾಡಲು ಮಂಡಳಿ ಈಗ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್, ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ವಿಶೇಷವೆಂದರೆ, ಈ ತಿಂಗಳ ನೀರಿನ ಬಿಲ್ ನೀಡುವಾಗಲೇ ಅದರ ಜೊತೆಗೆ OTS ಯೋಜನೆಯ ನೋಟಿಸ್ ಅನ್ನು ಕೂಡ ನೀಡಲಾಗುತ್ತದೆ. ಇದರಲ್ಲಿ ಗ್ರಾಹಕರು ಎಷ್ಟು ಅಸಲು ಪಾವತಿಸಬೇಕು, ಎಷ್ಟು ಬಡ್ಡಿ ಮನ್ನಾ ಆಗಲಿದೆ ಎಂಬ ಸಂಪೂರ್ಣ ವಿವರ ಇರಲಿದೆ.ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದೆ ತೊಂದರೆ ಅನುಭವಿಸುತ್ತಿರುವ ಗ್ರಾಹಕರು ಈ ಮೂರು ತಿಂಗಳ ಅವಧಿಯಲ್ಲಿ ತಮ್ಮ ಬಾಕಿಯನ್ನು ಚುಕ್ತಾ ಮಾಡಿಕೊಳ್ಳಬಹುದು. ಪಾವತಿ ವಿಧಾನ ಮತ್ತು ಅರ್ಹತಾ ಮಾನದಂಡಗಳ ಬಗ್ಗೆ ಬಿಲ್ ಜೊತೆ ಬರುವ ಪತ್ರದಲ್ಲಿ ಸ್ಪಷ್ಟ ಮಾಹಿತಿ ಇರಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮಂಡಳಿ ಮನವಿ ಮಾಡಿದೆ.ಒಟ್ಟಿನಲ್ಲಿ ಬಿಲ್ ಸುಳಿಯಲ್ಲಿ ಸಿಲುಕಿರುವ ಬೆಂಗಳೂರಿಗರಿಗೆ ಇದು ನೆಮ್ಮದಿಯ ಸುದ್ದಿಯಾಗಿದೆ. 

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.