2026-06-08 04:09:00

Virat Kohli liked a South African models photo on Instagram | ಇನ್‌ಸ್ಟಾಗ್ರಾಂನಲ್ಲಿ ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೊ ಲೈಕ್ ಮಾಡಿದ ವಿರಾಟ್ ಕೊಹ್ಲಿ ಅಲ್ಯಾರಿದಮ್ ಮೀಮ್ಸ್ ಹಾವಳಿ | Speed News Kannada

Virat Kohli liked a South African models photo on Instagram | ಇನ್‌ಸ್ಟಾಗ್ರಾಂನಲ್ಲಿ ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೊ ಲೈಕ್ ಮಾಡಿದ ವಿರಾಟ್ ಕೊಹ್ಲಿ ಅಲ್ಯಾರಿದಮ್ ಮೀಮ್ಸ್ ಹಾವಳಿ | Speed News Kannada

ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ 'ಲೈಕ್' ವಿವಾದ ಹಿಂಬಾಲಿಸುತ್ತಿದೆ. 2025ರಲ್ಲಿ, ಕೊಹ್ಲಿ ಭಾರತೀಯ ಮಾಡೆಲ್/ಇನ್‌ಫ್ಲುಯನ್ಸರ್ ಅವನೀತ್ ಕೌರ್ ಅವರ ಫೋಟೊವನ್ನು ತಪ್ಪಾಗಿ ಲೈಕ್ ಮಾಡಿದ್ದರು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಾಡೆಲ್ ಲಿಜ್‌ಲಾಜ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಅವರ ಪ್ರೊಫೈಲ್‌ನಿಂದ ಲೈಕ್ ಮಾಡಲಾಗಿದೆ ಎಂದು ಹೇಳಲಾದ ನಂತರ, ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. 'ಲೈಕ್' ಕಂಡುಬಂದ ನಂತರ, ಈ ಸ್ಕಿನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು. ಈ ಪರಿಸ್ಥಿತಿ ಮತ್ತು ಈ ವಿಷಯದ ಸುತ್ತಲಿನ ಸಂಚಲನವನ್ನು ಇಂಟರ್ನೆಟ್‌ನಲ್ಲಿ ಹಲವರು ಅಪಹಾಸ್ಯ ಮಾಡುತ್ತಿದ್ದಾರೆ.
'ಚೈನ್ ಸೆ ಲೈಕ್ ಭಿ ನಿ ಕರ್ನೇ ದೇತಾ ಯೇ ಸಮಜ್' ಎಂದು ಒಬ್ಬರು ಇನ್‌ ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. 'ರಿಲ್ಯಾಕ್ಸ್ ಗಯ್ಸ್, ಇದು ಅಲ್ಯಾರಿದಮ್' ಎಂದು ಮತ್ತೊಬ್ಬರು ಬರೆದಿದ್ದಾರೆ. ಅವನೀತ್ ಕೌರ್ ಅವರ ಫೋಟೊಗೆ ಲೈಕ್ ಮಾಡಿದ ಸಂದರ್ಭದಲ್ಲಿ ಕೊಹ್ಲಿ, 'ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಲಾರಿದಮ್ ತಪ್ಪಾಗಿ ಲೈಕ್ ಮಾಡಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ವದಂತಿಗಳನ್ನು ಹಬ್ಬಿಸಬಾರುದು ಎಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು' ಎಂದು ಹೇಳಿದ್ದರು.
ಇದೀಗ ಕೊಹ್ಲಿ ಮತ್ತೊಂದು ಅಂತಹದ್ದೇ ಹೇಳಿಕೆಯನ್ನು ನೀಡಬೇಕು, ಇದು ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ ಮತ್ತು ಇದು ಮತ್ತೊಂದು 'ಅಲ್ಲಾರಿದಮ್ ತಪ್ಪು' ಎಂದು ಹೇಳಬೇಕೆಂದು ಕೆಲವು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಕೊಹ್ಲಿ ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲಕ್ಕೆ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಅರ್ಧಶತಕಕ್ಕೆ ಕೇವಲ 1 ರನ್ ಬಾಕಿ ಇರುವಾಗ ಔಟಾದರು. ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸುಲಭ ಗೆಲುವು ಸಾಧಿಸಲು ಅವರ ಕೊಡುಗೆ ಪ್ರಮುಖವಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.