2026-06-08 01:26:11

Vijay-Rashmika flew out of Mumbai | ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ ಹಾಕಿ ಮುಂಬೈನಿಂದ ಹಾರಿದ ವಿಜಯ್ ರಶ್ಮಿಕಾ | Speed News Kannada

Vijay-Rashmika flew out of Mumbai  | ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ ಹಾಕಿ ಮುಂಬೈನಿಂದ ಹಾರಿದ ವಿಜಯ್ ರಶ್ಮಿಕಾ | Speed News Kannada

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಈ ವಿವಾಹದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ ಆ ವಿಷಯವನ್ನು ಈ ಜೋಡಿ ಮುಚ್ಚಿಡತ್ತಾ ಬಂದಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಇವರ ಪ್ರೀತಿಗೆ ಮದುವೆ ಎಂಬ ಮುದ್ರೆ ಬೀಳಲಿದೆ. ಅದಕ್ಕೂ ಮೊದಲು ವಿಜಯ್ ಹಾಗೂ ರಶ್ಮಿಕಾ ಮಂಬೈನಿಂದ ಹಾರಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೊದಲು ಭೇಟಿ ಆಗಿದ್ದು 'ಗೀತ ಗೋವಿಂದ' ಸೆಟ್ ಅಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಇವರ ಮಧ್ಯೆ ಗೆಳೆತನ ಕೂಡ ಗಟ್ಟಿ ಆಗುತ್ತಾ ಹೋಯಿತು. ಈಗ ಜೋಡಿ ವಿವಾಹ ಆಗುತ್ತಿದ್ದಾರೆ. ಜೈಪುರದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಈ ಜೋಡಿ ವಿದೇಶಕ್ಕೆ ತೆರಳಿದರೇ ಎಂಬ ಪ್ರಶ್ನೆ ಮೂಡಿದೆ.
ಮದುವೆಗೂ ಮೊದಲು ಒಂದಷ್ಟು ಶಾಪಿಂಗ್ ಮಾಡಬೇಕಾಗುತ್ತದೆ. ಆದರೆ, ಭಾರತದಲ್ಲಿ ಶಾಪಿಂಗ್ ಮಾಡೋದು ಅಸಾಧ್ಯ. ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಹೀಗಾಗಿ, ಇವರು ವಿದೇಶಕ್ಕೆ ತೆರಳಿದರೇ ಎನ್ನುವ ಪ್ರಶ್ನೆ ಮೂಡಿದೆ. ಭಾನುವಾರ (ಫೆಬ್ರವರಿ 15) ರಾತ್ರಿ ಮುಂಬೈನಿಂದ ಇವರು ಮ್ಯಾಂಚಿಂಗ್ ಡ್ರೆಸ್ ಹಾಕಿ ತೆರಳಿದ್ದಾರೆ. ಹಾಗಂತ ಇವರು ಕೈ ಕೈ ಹಿಡುದು ಒಟ್ಟಿಗೆ ಸಾಗಿಲ್ಲ. ಬದಲಿಗೆ ಬೇರೆ ಬೇರೆ ಸಮಯದಲ್ಲಿ ಇವರು ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇವರು ಒಂದಾಗಿರಬಹುದು ಎಂದು ಹೇಳಲಾಗುತ್ತಾ ಇದೆ. ರಶ್ಮಿಕಾ ಮಂದಣ್ಣ ಅವರು ಈವರೆಗೆ ವಿವಾಹದ ವಿಷಯವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಅವರು ಮದುವೆ ಬಗ್ಗೆ ಕೇಳಿದಾಗಲೆಲ್ಲ, 'ಸಮಯ ಬಂದಾಗ ಹೇಳುತ್ತೇನೆ' ಎಂದು ನುಣಚಿಕೊಂಡಿದ್ದಾರೆ. ಈಗಾಗಲೇ ಜೈಪುರದಲ್ಲಿ ಇವರ ಮದುವೆಗೆ ಸಿದ್ದತೆ ನಡೆದಿದೆ. ಫೆಬ್ರವರಿ 26ರಂದು ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಾ ಇದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.