ಚೆನ್ನೈ: ಸರ್ಕಾರ ರಚನೆಗೆ ಹಕ್ಕು ಮಂಡಿಸಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ಅವರು ಇಂದೂ ಸಹ ರಾಜ್ಯಪಾರನ್ನು ಭೇಟಿ ಮಾಡಿದ್ದಾರೆ. ಲೋಕಭವನಕ್ಕೆ ಆಗಮಸಿದ ವಿಜಯ್ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ ರಾಜ್ಯಪಾಲರು ಸರ್ಕಾರ ರಚನೆಗೆ ಅಗತ್ಯವಿರುವ 117 ಸದಸ್ಯರ ಪಟ್ಟಿ ನೀಡುವಂತೆ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ತನ್ನ ಬೆಂಬಲ ಸೂಚಿಸಿದ್ದು, ಟಿವಿಕೆ ಒಟ್ಟು 113 ಶಾಸಕರ ಬಲ ಹೊಂದಿದೆ. ಆದರೆ 'ಮ್ಯಾಜಿಕ್ ಸಂಖ್ಯೆ ಆಗಿರುವ 117 ಶಾಸಕರ ಬೆಂಬಲ ಇರುವುದಕ್ಕೆ ದಾಖಲೆ ಒದಗಿಸುವಂತೆ ರಾಜ್ಯಪಾಲರು ಇಂದೂ ಸಹ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಿಪಿಐ, ಸಿಪಿಐಎಂ ಪಕ್ಷಗಳು ಟಿವಿಕೆಗೆ ಬೆಂಬಲ ಸೂಚಿಸಿವೆ. ಬಹುಶಃ ಇಂದು ಸಂಜೆಯೊಳಗೆ ರಾಜ್ಯಪಾಲರಿಗೆ 117 ಶಾಸಕರ ಪಟ್ಟಿ ನೀಡುವ ಸಂಭವವಿದೆ.