2026-06-08 01:26:57

Vijay Devarakonda went to his hometown with his beloved wife | ಮುದ್ದು ಮಡದಿ ಜೊತೆ ಊರಿಗೆ ಹೋದ ವಿಜಯ್ ದೇವರಕೊಂಡ | Speed News kannada

Vijay Devarakonda went to his hometown with his beloved wife | ಮುದ್ದು ಮಡದಿ ಜೊತೆ ಊರಿಗೆ ಹೋದ ವಿಜಯ್ ದೇವರಕೊಂಡ | Speed News kannada

ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ ಅವರನ್ನ ತನ್ನೂರಿಗೆ ಕರೆದುಕೊಂಡು ಹೋಗಿದ್ದಾರೆ. ಹೊಸದಾಗಿ ಮದುವೆ ಆಗಿ ಬಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ಅವರ ಊರಿನ ಜನ ತುಂಬು ಪ್ರೀತಿಯಿಂದ ಸ್ವಾಗತಿಸಿದ್ದಾರೆ. 
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಹಣೆಗೆ ಕುಂಕುಮ ಇಟ್ಟು ಗ್ರಾಮದ ಜನ ತುಂಬು ಹೃದಯದಿಂದ ವೆಲ್‌ ಕಮ್ ಮಾಡಿದ್ದಾರೆ. ಈ ಕ್ಷಣದ ವಿಡಿಯೋ ವೈರಲ್ ಆಗಿದ್ದು , ಮೆಚ್ಚುಗೆಗೆ ಪಾತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಮಾರ್ಚ್-೧ ರಂದು ತಿರುಪತಿಗೆ ಹೋಗಿದ್ದರು. ಅಲ್ಲಿ ಭಕ್ತಿರಿಗೆ  ಕೂಡ ಸಿಹಿ  ಹಂಚಿದರು. ಇದಾದ ನಂತರ ವಿಜಯ್ ದೇವರಕೊಂಡ ಅವರು ತಮ್ಮ ಹುಟ್ಟೂರಿಗೂ ಕರೆದುಕೊಂಡು ಹೋಗಿದ್ದಾರೆ.
ಇನ್ನು ನವ ದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅದ್ದೂರಿ ರಿಸೆಪ್ಷನ್ ಪ್ಲಾನ್ ಮಾಡಿದ್ದು, ಹೈದ್ರಾಬಾದ್ ನಲ್ಲಿ ಇಟ್ಟುಕೊಂಡಿದ್ದಾರೆ. ಕೃಷ್ಣ ತಾಜ್ ಹೋಟೆಲ್ ಅಲ್ಲಿಯೇ ರಿಸೆಪ್ಷನ್ ಆಯೋಜನೆ ಆಗಿದೆ. ಆದರೆ, ಇಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ಬದಲಾಗಿ ಆಹ್ವಾನಿತರಿಗೆ ಮಾತ್ರ ಪ್ರವೇಶ ಇದೆ ಎನ್ನಲಾಗ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.