2026-06-08 01:27:12

Vijay Devarakonda new movie with the director of Hai Nanna | ಹಾಯ್ ನಾನ್ನ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸ ಸಿನಿಮಾ | Speed news kannada

Vijay Devarakonda new movie with the director of Hai Nanna | ಹಾಯ್ ನಾನ್ನ ನಿರ್ದೇಶಕರ ಜೊತೆ ವಿಜಯ್ ದೇವರಕೊಂಡ ಹೊಸ ಸಿನಿಮಾ | Speed news kannada

ಟಾಲಿವುಡ್ ರೌಡಿಬಾಯ್ ವಿಜಯ್ ದೇವರಕೊಂಡ ಹೊಸ ಚಿತ್ರ ಘೋಷಣೆಯಾಗಿದೆ. ಹಾಯ್ ನಾನ್ನ ಸಿನಿಮಾ ಖ್ಯಾತಿಯ ಶೌರ್ಯುವ್ ಜೊತೆ ವಿಜಯ್ ಕೈ ಜೋಡಿಸಿದ್ದಾರೆ. ಸಿನಿಮಾದ ಅನೌನ್ಸ್‌ಮೆಂಟ್ ಪೋಸ್ಟರ್ ಆಕರ್ಷಕವಾಗಿದೆ. ಈ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಾಲ್ಕು ಶ್ವಾನಗಳನ್ನು ಹಿಡಿದು ಗತ್ತಿನಿಂದ ನಡೆದು ಬರುತ್ತಿದ್ದಾರೆ. ಅವರ ಬೆನ್ನ ಹಿಂದೆ ಏಳು ಜನರು ವಿವಿಧ ಆಯುಧಗಳನ್ನು ಹಿಡಿದು ನಿಂತಿದ್ದಾರೆ‌.

ಹೆಸರಿಡದ ಚಿತ್ರದಲ್ಲಿ ಜಾಗತಿಕ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್‌ನ ಖ್ಯಾತ ಸರಣಿಗಳಾದ ‘ಹೌಸ್ ಆಫ್ ದಿ ಡ್ರ್ಯಾಗನ್’ ಮತ್ತು ‘ಫಾಲ್ಔಟ್‌’ಗೆ ಕೆಲಸ ಮಾಡಿದ ಅಲೆಜಾಂಡ್ರೊ ಮಾರ್ಟಿನೆಜ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ‘ಬ್ಯಾಟ್‌ಮ್ಯಾನ್ ಫಾರೆವರ್’ ಹಾಗೂ ‘ಗಾಡ್ಸ್ ಆಫ್ ಈಜಿಪ್ಟ್’ ನಂತಹ ಬೃಹತ್ ಸಿನಿಮಾಗಳ ವಿಎಫ್‌ಎಕ್ಸ್ ಮೇಲ್ವಿಚಾರಣೆ ಮಾಡಿದ್ದ ಎರಿಕ್ ಡಸ್ಟರ್ ಅವರು ವಿಷ್ಯುವಲ್ ಎಫೆಕ್ಟ್ಸ್ ನೋಡಿಕೊಳ್ಳಲಿದ್ದಾರೆ.

 ‘ಅನಿಮಲ್’ ಮತ್ತು ‘ಓಂ ಶಾಂತಿ ಓಂ’ ಚಿತ್ರಗಳಿಗೆ ಕೆಲಸ ಮಾಡಿದ ಸುರೇಶ್ ಸೆಲ್ವರಾಜನ್ ಕಲಾ ನಿರ್ದೇಶನ ಹಾಗೂ ಹೇಷಮ್ ಅಬ್ದುಲ್ ವಹಾಬ್ ಅವರ ಸಂಗೀತ ಈ ಚಿತ್ರಕ್ಕಿದೆ. ವೀರಾ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾ, ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ. ಸದ್ಯಕ್ಕೆ ಸಿನಿಮಾಗೆ ‘VDxShouryuv’ ಎಂದು ಕರೆಯಲಾಗಿದೆ. ಅಂದಹಾಗೇ ಇದು ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಿರಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.