2026-07-23 09:10:48

Varuna thunderous roar in Bengaluru, breaking a 23-year record|ಬೆಂಗಳೂರಿನಲ್ಲಿ ವರುಣನ ಅಬ್ಬರ, 23 ವರ್ಷಗಳ ದಾಖಲೆ ಬ್ರೇಕ್|Speed News Kannada

Varuna thunderous roar in Bengaluru, breaking a 23-year record|ಬೆಂಗಳೂರಿನಲ್ಲಿ ವರುಣನ ಅಬ್ಬರ, 23 ವರ್ಷಗಳ ದಾಖಲೆ ಬ್ರೇಕ್|Speed News Kannada

ಬೆಂಗಳೂರುದಲ್ಲಿ ನಿನ್ನೆ ಸುರಿದ ಭಾರೀ ಮಳೆ ಏಪ್ರಿಲ್ ತಿಂಗಳ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.ಆಲಿಕಲ್ಲು, ಗುಡುಗು, ಮಿಂಚಿನ ಸಹಿತ ಸುರಿದ ಮಳೆಯಿಂದ 111 ಮಿಲಿಮೀಟರ್ ಮಳೆಯಾಗಿದ್ದು, 2001ರ ನಂತರ ಇದೇ ಮಟ್ಟದ ಮಳೆಯಾಗಿದೆ. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಸಂಪಂಗಿರಾಮನಗರ – 39 ಮಿಮೀ, ಪುಲಕೇಶಿನಗರ – 36.5 ಮಿಮೀ, ಬೊಮ್ಮನಹಳ್ಳಿ – 31 ಮಿಮೀ, ಕಾಟನ್‌ಪೇಟೆ – 29 ಮಿಮೀ, HAL – 25 ಮಿಮೀ.ಮುಕ್ಕಾಲು ಕರ್ನಾಟಕದಲ್ಲಿಯೂ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಮಳೆಯಿಂದ ಉಂಟಾದ ಸಮಸ್ಯೆಗಳ ಹಿನ್ನೆಲೆ, ಮ್ಯಾನ್‌ಹೋಲ್ ತೆರವು, ಮರದ ಕೊಂಬೆಗಳ ಕಟ್ ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.