2026-06-08 01:27:11

US Reduces Tariffs On India After Deal With European Union | ಯುರೋಪಿಯನ್ ಒಕ್ಕೂಟದ ಜೊತೆ ಒಪ್ಪಂದ ಬೆನ್ನಲ್ಲೇ ಭಾರತಕ್ಕೆ ಸುಂಕ ಕಡಿಮೆ ಮಾಡಿದ ಅಮೆರಿಕಾ | Speed News Kannada

US Reduces Tariffs On India After Deal With European Union | ಯುರೋಪಿಯನ್ ಒಕ್ಕೂಟದ ಜೊತೆ ಒಪ್ಪಂದ ಬೆನ್ನಲ್ಲೇ ಭಾರತಕ್ಕೆ ಸುಂಕ ಕಡಿಮೆ ಮಾಡಿದ ಅಮೆರಿಕಾ | Speed News Kannada

ನವದೆಹಲಿ: ಯುರೋಪಿಯನ್ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ ಮಾಡಿ ಇಡೀ ಜಗತ್ತನ್ನೇ ಭಾರತ ನಿಬ್ಬೆರಗಾಗಿಸಿದ ಬೆನ್ನಲ್ಲೇ ಅಮೆರಿಕಾ ತಣ್ಣಗಾಗಿದೆ. ಇಷ್ಟು ದಿನ ಸುಂಕ ಹೆಚ್ಚಿಸುತ್ತೇನೆ ಎಂದು ಹಾರಾಡುತ್ತಿದ್ದ ಡೊನಾಲ್ಡ್ ಟ್ರಂಪ್ ಈಗ ಸುಂಕ ಇಳಿಕೆ ಮಾಡಿದ್ದಾರೆ.ಅಮೆರಿಕಾ ತನ್ನ ಮೇಲೆ 50% ಸುಂಕ ವಿಧಿಸಿದರೂ ಸೊಪ್ಪು ಹಾಕದ ಭಾರತ ಯುರೋಪಿಯನ್ ಒಕ್ಕೂಟ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದು ಐತಿಹಾಸಿಕ ಒಪ್ಪಂದವಾಗಿದ್ದು, ಭಾರತ ನೀವಲ್ಲದೇ ಇದ್ದರೆ ನಮಗೆ ಅನ್ಯ ಆಯ್ಕೆಗಳಿವೆ ಎಂದು ಅಮೆರಿಕಾಗೆ ಪರೋಕ್ಷವಾಗಿ ಸಂದೇಶ ನೀಡಿದಂತಾಗಿತ್ತು.
ಇದರ ಬೆನ್ನಲ್ಲೇ ಈಗ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿದ್ದ ಸುಂಕವನ್ನು 18%ಗೆ ಇಳಿಕೆ ಮಾಡಿದ್ದಾರೆ. ಇದೀಗ ಭಾರತದ ಮೇಲಿನ ಸುಂಕ ಇಳಿಕೆಯಲ್ಲಿ ಭಾರೀ ಇಳಿಕೆಯಾಗಿದ್ದು ಇದು ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.
ಇದೀಗ ಪಾಕಿಸ್ತಾನಕ್ಕೆ ಶೇ.19, ಬಾಂಗ್ಲಾದೇಶಕ್ಕೆ ಶೇ.20 ಚೀನಾಗೆ 37% ಸುಂಕ ವಿಧಿಸಲಾಗುತ್ತಿದೆ. ಭಾರತಕ್ಕೆ ಸುಂಕ ಇಳಿಕೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವಿಟ್ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟಂಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.