2026-06-08 01:30:52

US-Iran tensions rise, USA alone on the battlefield|ಅಮೆರಿಕ -ಇರಾನ್ ಉದ್ವಿಗ್ನತೆ ಹೆಚ್ಚಳ ರಣಭೂಮಿಯಲ್ಲಿ ಯುಎಸ್‌ಎ ಏಕಾಂಗಿ|Speed News Kannada

US-Iran tensions rise, USA alone on the battlefield|ಅಮೆರಿಕ -ಇರಾನ್ ಉದ್ವಿಗ್ನತೆ ಹೆಚ್ಚಳ ರಣಭೂಮಿಯಲ್ಲಿ ಯುಎಸ್‌ಎ ಏಕಾಂಗಿ|Speed News Kannada

ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು. ವಿಶ್ವದ ಶಕ್ತಿಶಾಲಿ ರಾಷ್ಟ್ರವಾದ ಅಮೆರಿಕ ಈಗ ಇರಾನ್ ಎದುರು ಅಪ್ರತೀಕ್ಷಿತ ಸವಾಲನ್ನು ಎದುರಿಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇರಾನ್ ವಿರುದ್ಧ ಸೈನಿಕ ಕ್ರಮಕ್ಕೆ ಸಜ್ಜಾಗಿದ್ದ ಅಮೆರಿಕ, ಈಗ ಯುದ್ಧಭೂಮಿಯಲ್ಲಿ ಏಕಾಂಗಿಯಾಗುವ ಸಾಧ್ಯತೆಗಳ ಬಗ್ಗೆ ವರದಿಗಳು ಹೊರಬಿದ್ದಿವೆ. ಇಸ್ರೇಲ್‌ ಮಾಧ್ಯಮಗಳ ವರದಿ ಪ್ರಕಾರ, ವಿಶೇಷವಾಗಿ ಇಸ್ರೇಲ್ ಅಮೆರಿಕ ಇರಾನ್ ವಿರುದ್ಧ ಭೂಯುದ್ಧ ಆರಂಭಿಸಿದರೆ ನೇರವಾಗಿ ಭಾಗವಹಿಸುವುದಿಲ್ಲ ಎನ್ನಲಾಗಿದೆ. ಇದು ಪ್ರಾದೇಶಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಕಾಣಲಾಗುತ್ತಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೀಡಿರುವ ಎಚ್ಚರಿಕೆಗಳು ಹಾಗೂ ಕ್ಷಿಪಣಿ ದಾಳಿಯ ಭೀತಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಇದರಿಂದ ದೊಡ್ಡ ರಾಷ್ಟ್ರಗಳೇ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿವೆ.ಇಸ್ರೇಲ್ ಈ ನಿರ್ಧಾರ ಕೈಗೊಳ್ಳಲು ಹಲವು ಕಾರ್ಯತಂತ್ರದ ಕಾರಣಗಳಿವೆ. ಗಾಜಾ ಮತ್ತು ಲೆಬನಾನ್ ಪ್ರದೇಶಗಳಲ್ಲಿ ಈಗಾಗಲೇ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಇಸ್ರೇಲ್, ಮತ್ತೊಂದು ಯುದ್ಧಕ್ಕೆ ಇಳಿಯುವುದನ್ನು ತಪ್ಪಿಸಲು ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ಇನ್ನೂ ಅಧಿಕೃತವಾಗಿ ಭೂಯುದ್ಧಕ್ಕೆ ಅನುಮತಿ ನೀಡಿಲ್ಲ.ಹೀಗಾಗಿ, ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯುತ್ತವೆಯೇ ಅಥವಾ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.