2026-06-08 03:53:37

US attacks Iran B1 bridge|ಇರಾನ್‌ನ ಬಿ1 ಸೇತುವೆಯ ಮೇಲೆ ಅಮೆರಿಕ ದಾಳಿ |Speed News Kannada

US attacks Iran B1 bridge|ಇರಾನ್‌ನ ಬಿ1 ಸೇತುವೆಯ ಮೇಲೆ ಅಮೆರಿಕ ದಾಳಿ |Speed News Kannada

ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿದ್ದು, ಇಸ್ರೇಲ್ ಮತ್ತು ಅಮೆರಿಕ ಸಂಯುಕ್ತ ದಾಳಿ ಇರಾನ್ ಮೇಲೆ ಮುಂದುವರಿದಿದೆ. ಸಂಘರ್ಷ ಈಗ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಅಲ್ಬೋರ್ಜ್ ಪ್ರಾಂತ್ಯ ತೀವ್ರವಾಗಿ ತತ್ತರಿಸಿದೆ.


ಕರಾಜ್ ನಗರದಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ದಾಳಿಯಿಂದ ಗಣನೀಯ ಹಾನಿಯಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಈ ನಡುವೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇರಾನ್ ವಿರುದ್ಧದ ದಾಳಿಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.


ಹೊರ್ಮುಜ್ ಜಲಸಂಧಿ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, “ಅಮೆರಿಕಗೆ ಆ ಮಾರ್ಗದ ಅವಶ್ಯಕತೆ ಕಡಿಮೆ, ಬೇಕಾದಷ್ಟು ತೈಲ ನಮ್ಮಲ್ಲೇ ಇದೆ” ಎಂದು ಹೇಳಿದ್ದಾರೆ. ಹೊರ್ಮುಜ್‌ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಈ ಪ್ರದೇಶದ ಉದ್ವಿಗ್ನತೆ ವಿಶ್ವದ ಆರ್ಥಿಕತೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದ ಈ ಸಂಘರ್ಷ ಮತ್ತಷ್ಟು ವಿಸ್ತಾರವಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.