2026-06-08 01:28:58

US And Iran | ಪರಮಾಣು ಮಾತುಕತೆಗೆ ಅಮೆರಿಕ ಮತ್ತು ಇರಾನ್ ಸಿದ್ಧ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಚರ್ಚೆ | Speed News Kannada

US And Iran | ಪರಮಾಣು ಮಾತುಕತೆಗೆ ಅಮೆರಿಕ ಮತ್ತು ಇರಾನ್ ಸಿದ್ಧ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಚರ್ಚೆ | Speed News Kannada

ಅಮೆರಿಕ ಹಾಗೂ ಇರಾನ್ ನಡುವೆ ಭುಗಿಲೆದ್ದ ದ್ವೇಷದ ಬೆಂಕಿ ಕೊನೆಗೂ ತಣ್ಣಗಾಗುವ ಸಮಯ ಈಗ ಬಂದಿದೆ. ಪರಮಾಣು ವಿಚಾರವಾಗಿ ಅಮೆರಿಕ & ಇರಾನ್ ಮಧ್ಯೆ ದೊಡ್ಡ ಗಲಾಟೆಯೇ ಶುರುವಾಗುವ ಆತಂಕ ಮೂಡಿತ್ತು. ಈ ಪೈಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೇನೆಗೆ ಆದೇಶ ನೀಡಿ, ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆಗಳನ್ನು ಇರಾನ್ ಜಲಗಡಿ ಸಮೀಪಕ್ಕೆ ನುಗ್ಗಿಸಿದ್ದರು.
ಹೀಗಿದ್ದಾಗ ಯುಎಸ್ಎಸ್ ಅಬ್ರಹಾಂ ಲಿಂಕನ್ ಅಮೆರಿಕ ಯುದ್ಧ ನೌಕೆ ಜೊತೆಗೆ ಇನ್ನೊಂದು ಭಾರಿ ಗಾತ್ರದ ಯುದ್ಧ ನೌಕೆ ಕೂಡ ಇರಾನ್ ಕಡೆಗೆ ಹೊರಟು ನಿಂತಿತ್ತು. ಹೀಗೆ ಪರಿಸ್ಥಿತಿ ಕೈಮೀರುವ ಎಲ್ಲಾ ರೀತಿಯ ಆತಂಕ ಕಾಡುವಾಗಲೇ ದಿಢೀರ್ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಅಮೆರಿಕ ಹಾಗೂ ಇರಾನ್ ಮಹತ್ವದ ಚರ್ಚೆಗೆ ಒಪ್ಪಿಕೊಂಡಿವೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ಇರಾನ್ ವಿರುದ್ಧ ಘೋರ ಕಾರ್ಯಾಚರಣೆಗೆ ಸಿದ್ದ ಎಂಬ ಮುನ್ಸೂಚನೆ ಕೊಟ್ಟಿದ್ದರು. ಈ ಬೆಳವಣಿಗೆ ನಂತರ ತಕ್ಷಣ ಅಲರ್ಟ್ ಆಗಿದ್ದ ಇರಾನ್, ಕೂಡಲೇ ಶಾಂತಿ ಮಾತುಕತೆಗೆ ತಾನು ಸಿದ್ದ ಎಂಬ ಸಂದೇಶ ರವಾನಿಸಿತ್ತು. ಆಗ ಒಮಾನ್ ನೇತೃತ್ವದಲ್ಲಿ 2ನೇ ಸುತ್ತಿನ ಮಾತುಕತೆಗೆ ಇರಾನ್ ಒಪ್ಪಿಕೊಂಡಿತ್ತು, ಇದೀಗ ಸ್ವಿಝರ್ಲ್ಯಾಂಡ್‌ನ ಜಿನವಾದಲ್ಲಿ ಇರಾನ್ ಮತ್ತು ಅಮೆರಿಕದ ಅಧಿಕಾರಿಗಳು ಮಹತ್ವದ ಚರ್ಚೆ ಆರಂಭ ಮಾಡಲಿದ್ದಾರೆ. ಹೀಗಾಗಿ ಇಡೀ ಜಗತ್ತಿನ ಚಿತ್ರ ಸ್ವಿಝರ್ಲ್ಯಾಂಡ್‌ ಜಿನವಾ ಮೇಲೆ ನೆಟ್ಟಿದೆ. ಏಕೆಂದರೆ ಅಮೆರಿಕ ಮತ್ತು ಇರಾನ್ ನಡುವಿನ ಕಲಹ ಪರಮಾಣು ದಾಳಿ ಭೀತಿ ಹುಟ್ಟು ಹಾಕಿತ್ತು, ಇದೇ ಕಾರಣಕ್ಕೆ ಈ ತಿಕ್ಕಾಟ ಇಡೀ ಜಗತ್ತಿನ ಗಮನ ಸೆಳೆದಿತ್ತು ಕೂಡ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.