2026-03-07 05:12:41

US Air Force deployed in the Middle East amid tensions | ಉದ್ವಿಗ್ನತೆ ನಡುವೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ವಾಯುಪಡೆ ಜಮಾವಣೆ | Speed News Kannada

US Air Force deployed in the Middle East amid tensions | ಉದ್ವಿಗ್ನತೆ ನಡುವೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ವಾಯುಪಡೆ ಜಮಾವಣೆ | Speed News Kannada

ಟೆಲ್ ಅವೀವ್ : ಇರಾನ್‌ ನಲ್ಲಿರುವ ಪರಮಾಣು ಮೂಲಸೌಕರ್ಯಗಳನ್ನು ನಾಶ ಮಾಡಲು ಶೀಘ್ರವೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಿಲಿಟರಿ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಉದ್ವಿಗ್ನತೆ ನಡುವೆ ಮಧ್ಯಪ್ರಾಚ್ಯಕ್ಕೆ ಗಮನಾರ್ಹ ಸಂಖ್ಯೆಯ ಫೈಟರ್ ಜೆಟ್‌ಗಳು ಮತ್ತು ಬೆಂಬಲ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ ಎಂದು ವರದಿಯಾಗಿದೆ.2003 ರ ಇರಾಕ್ ಆಕ್ರಮಣದ ನಂತರ ಈ ಪ್ರದೇಶದಲ್ಲಿ ಅಮೆರಿಕದ ವಾಯುಪಡೆಯ ಅತಿದೊಡ್ಡ ಕೇಂದ್ರೀಕರಣ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವರದಿಗಳ ಪ್ರಕಾರ, ಮಿಲಿಟರಿ ಪಡೆಯು ಸುಧಾರಿತ ಫೈಟರ್ ಜೆಟ್‌ಗಳ ಬಹು ಸ್ಕ್ಯಾಡ್ರನ್‌ ಗಳನ್ನು ಒಳಗೊಂಡಿದ್ದು - F-35s, F-22s, F-15s ಮತ್ತು F-16s ಗಳನ್ನೂ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಯುಎಸ್ ನೌಕಾಪಡೆ ಪ್ರಸ್ತುತ ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭಾವ್ಯ ಕಾರ್ಯಾಚರಣೆಗೆ ನೆರವಾಗಲು 13 ಹಡಗುಗಳನ್ನು ಹೊಂದಿದ್ದು, ಇದರಲ್ಲಿ ಯುಎಸ್‌ಎಸ್‌ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧ ರಕ್ಷಿಸುವ ಸಾಮರ್ಥ್ಯವಿರುವ ಒಂಬತ್ತು ವಿಧ್ವಂಸಕ ಸಾಧನಗಳು ಸೇರಿವೆ.
ಪರಮಾಣುವಿಗೆ ಸಂಬಂಧಿಸಿದಂತೆ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಈ ದಾಳಿ ನಡೆಯುವ ಸಾಧ್ಯತೆ ಇದ್ದು, ಇದು ಈ ಹಿಂದೆ ನಡೆದ ದಾಳಿಗಿಂತ ವಿಭಿನ್ನವಾಗಿರಲಿದೆ ಎಂದು ಆಕ್ಸಿಯಾನ್ ವರದಿ ಮಾಡಿದೆ. ಈ ವಾರಾಂತ್ಯದಲ್ಲಿ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸೇನೆ ಸಿದ್ಧವಾಗಿದೆ, ಆದರೆ ಅಂತಹ ಕ್ರಮಕ್ಕೆ ಅಧಿಕಾರ ನೀಡಬೇಕೆ ಬೇಡವೇ ಎಂಬುದರ ಕುರಿತು ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. ದಾಳಿ ನಡೆದಲ್ಲಿ ಈ ಬಾರಿ ಅಮೆರಿಕದೊಂದಿಗೆ ಇಸ್ರೇಲ್ ಕೈ ಜೋಡಿಸಬಹುದು ಎನ್ನಲಾಗಿದೆ.
ಇದೆಲ್ಲದರ ನಡುವೆಯೂ ಪರಮಾಣು ಮೂಲಸೌಕರ್ಯಗಳನ್ನು ನಾಶ ಮಾಡುವುದಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇರಾನ್‌ ನ ಅಧಿಕಾರಗಳ ನಡುವೆ ಜಿನಿವಾದಲ್ಲಿ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಈ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿ ಮತ್ತೂಮ್ಮೆ ಯುದ್ಧದ ವಾತಾವರಣ ಸೃಷ್ಟಿಯಾಗಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.