2026-06-08 03:53:45

Union Minister Kumaraswamy thunders | ಕಾಂಗ್ರೆಸ್‌ ಸರ್ಕಾರ ಬಡವರ ಬದುಕನ್ನು ಬೀದಿಗೆ ತಂದಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು | Speed News Kannada

Union Minister Kumaraswamy thunders | ಕಾಂಗ್ರೆಸ್‌ ಸರ್ಕಾರ ಬಡವರ ಬದುಕನ್ನು ಬೀದಿಗೆ ತಂದಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು | Speed News Kannada

ವಿಜಯಪುರ: ಜೆಡಿಎಸ್‌ ಪಕ್ಷ ಸ್ಥಾಪನೆಯಾಗಿ 25  ವರ್ಷ ಪೂರ್ಣಗೊಂಡ ಬೆಳ್ಳಿ ಹಬ್ಬದ ಅಂಗವಾಗಿ  ನಗರದಲ್ಲಿ ಬೃಹತ್‌ ಸಮಾವೇಶ ನಡೆಯುತ್ತಿದೆ. 
ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು ಮತ್ತು ಮುಖಂಡರು ಭಾಗಿಯಾಗಿದ್ದಾರೆ.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಪಕ್ಷದ ಬಲವರ್ಧನೆಗೆ ರಣಕಹಳೆ ಮೊಳಗಿಸಿದ್ದಾರೆ. 
 ಜೆಡಿಎಸ್‌ ಪಕ್ಷ ದ ಶಕ್ತಿಯೇ ಕಾರ್ಯಕರ್ತರು. ದೇವೇಗೌಡರು ರಾಜ್ಯಕ್ಕೆ ನೀರಾವರಿ ಯೋಜನೆ ಕೊಟ್ಟಿದ್ದಾರೆ. ನಿಮ್ಮ ಆರ್ಶೀವಾದದಿಂದ ದೇವೇಗೌಡ್ರು ಪ್ರಧಾನಿ ಆಗಿದ್ದರು. ಇಲ್ಲಿಗೆ ನಿಮ್ಮ ಆರ್ಶೀವಾದ ಪಡೆಯಲು ಬಂದಿದ್ದೇನೆ. 50 ವರ್ಷ ಈ ಭಾಗದ ನೀರಾವರಿಗೆ ಹಣ ನೀಡಲಿಲ್ಲ. ಯಾವ ಸರ್ಕಾರವೂ ನೀರಾವರಿಗೆ ಹಣ ನೀಡಲಿಲ್ಲ. ದೇವೇಗೌಡರು 20 ಸಾವಿರ ಕೋಟಿ ಯೋಜನೆ ನೀಡಿದ್ದರು. ಇದನ್ನ ಉತ್ತರ ಕರ್ನಾಟಕದ ಜನ ಮರೆಯುವ ಹಾಗಿಲ್ಲ ಎಂದರು. 
ಮಹಿಳೆಯರು 2 ಸಾವಿರಕ್ಕೆ ಮರುಳಾಗ್ತಿದ್ದೀರಿ. ರಾಜ್ಯ ಸರ್ಕಾರ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಮದ್ಯದ ದರ, ಮನೆ ರಿಜಿಸ್ಟ್ರೇಷನ್‌ ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. ಸರ್ಕಾರ 7 ಲಕ್ಷ 65 ಸಾವಿರ ಕೋಟಿ ಸಾಲ ಮಾಡಿದೆ. 17ನೇ ಬಜೆಟ್‌ ಗೆ ಮತ್ತೆ ಸಾಲ ಮಾಡಲು ಹೊರಟಿದ್ದಾರೆ. ಈ ಸಾಲವನ್ನು ನೀವೇ ತೀರಿಸಬೇಕು. ನಿಮ್ಮ ಜೇಬಿನಿಂದ ತೆಗೆದು ಸಾಲ ತೀರಿಸ್ತಾರೆ ಎಂದರು.
ಉದ್ಯೋಗ ನೀಡುವಂತೆ ಧಾರವಾಡದಲ್ಲಿ ಯುವಕರು ಪ್ರತಿಭಟನೆ ಮಾಡಿದ್ರು. ನಾನು ಸಿಎಂ ಇದ್ದಾಗ 56 ಸಾವಿರ ಶಿಕ್ಷಕರ ನೇಮಕ ಮಾಡಿದ್ದೆ. ಮೂರು ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ?.  ಎಂದು ಪ್ರಶ್ನಿಸಿದರು.
ಕೆಲ ನಾಯಕರು ಉತ್ತರ ಕರ್ನಾಟಕ ಅಭಿವೃದ್ದಿ ಆಗಿಲ್ಲ. ಪ್ರತ್ಯೇಕ ರಾಜ್ಯ ಕೊಡಿ ಎಂದು ಹೇಳುವವರನ್ನು ನಂಬಬೇಡಿ. ಇವರೇ ನಿಜವಾದ ಶತ್ರುಗಳು. ಉ.ಕರ್ನಾಟಕ ಅಭಿವೃದ್ದಿ ಬಗ್ಗೆ ಗೋವಿಂದರಾವ್‌ ನೇತೃತ್ವ ಕಮಿಟಿ ವರದಿ ಕೊಟ್ಟಿದೆ.  ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದೆ ಎಂದರು.
ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೀವಾ? ಈಗ ಗ್ಯಾರಂಟಿ ಯೋಜನೆಗಳು ಹೊರೆ ಅಂತಿದ್ದಾರೆ. ಬಡವರ ಬದುಕು ಬೀದಿಗೆ ತಂದಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ 32 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇವೆ ಅಂತಿದ್ದಾರೆ. ಹಾಗಾದರೆ  ಉತ್ತರ ಕರ್ನಾಟಕ ಈಗ ಎಲ್ಲಿ ಅಭಿವೃದ್ದಿಯಾಗಿದೆ ಎಂದು ಕುಮಾರಸ್ವಾಮಿ ಕೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.