2026-03-07 12:26:05

Two short films that caught everyones attention within 20 minutes | 20 ನಿಮಿಷಗಳಲ್ಲೇ ಎಲ್ಲರ ಗಮನ ಸೆಳೆದ ಎರಡು ಕಿರುಚಿತ್ರಗಳು ಐ ಸಿ ಯು (I see you) ಹಾಗೂ ಮಂಡಲ | Speed News Kannada

Two short films that caught everyones attention within 20 minutes | 20 ನಿಮಿಷಗಳಲ್ಲೇ ಎಲ್ಲರ ಗಮನ ಸೆಳೆದ ಎರಡು ಕಿರುಚಿತ್ರಗಳು ಐ ಸಿ ಯು (I see you) ಹಾಗೂ ಮಂಡಲ | Speed News Kannada

ಮೈಸೂರಿನ ಪ್ರತಿಭೆಗಳ ಪ್ರತಿಭೆಗೆ ಫಿದಾ ಆದ ನೋಡುಗರು .

ಹಿರಿತೆರೆಯ ಚಿತ್ರಗಳಷ್ಟೇ ಈಗ ಕಿರುಚಿತ್ರಗಳು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಅಂದುಕೊಂಡಿದ್ದನ್ನು ಕೆಲವೇ ನಿಮಿಷಗಳಲ್ಲಿ ದೃಶ್ಯರೂಪಕ್ಕೆ ತರುವುದು ಕಷ್ಟ. ಆದರೆ ಈಗಿನ ಯುವಪೀಳಿಗೆ ಅದನ್ನು ಸಾಧ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ರವೀಂದ್ರ ಜೋಶಿ ನಿರ್ಮಾಣದ, ಮಿಂಚು ಜೋಶಿ ನಿರ್ದೇಶನದ ಹಾಗೂ ಮಿಂಚು ಜೋಶಿ, ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂದೀಪ್ ಶಿವಶಂಕರ್ ನಟನೆಯ "ಐ‌ ಸಿ ಯು" ಹಾಗೂ ರಾಮನ್ ಪ್ರೊಡಕ್ಷನ್ಸ್ ನಿರ್ಮಾಣದ,‌ ರಿಷಿ ರಾಮನ್ ರಚನೆ ಹಾಗೂ ನಿರ್ದೇಶನದ ಹಾಗೂ ರಿಷಿ ರಾಮನ್, ಅನಾಮಿಕ ದತ್ತ, ಪ್ರಜ್ವಲ್ ಕುಮಾರ್ ಹಾಗೂ ಮಾನಸ ರಾಜ್ ಗೌಡ ನಟನೆ 'ಮಂಡಲ' ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಎರಡು ಕಿರುಚಿತ್ರಗಳು ಇಪ್ಪತ್ತು ನಿಮಿಷಗಳ ಅವಿಧಿಯದಾಗಿದೆ. ಪ್ರದರ್ಶನದ ನಂತರ ಎರಡು ತಂಡದ ಸದಸ್ಯರು ಮಾತನಾಡಿದರು.                     

ನಾನು ಪರಂವಃ ಸ್ಟುಡಿಯೋಸ್ ನಿರ್ಮಾಣದ "ಸಕುಟುಂಬ ಸಮೇತ ಹಾಗೂ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಸ್ವತಂತ್ರ ನಿರ್ದೇಶನದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಮುಂಬೈ ನಗರ ಜೀವನದ ಅಸ್ತವ್ಯಸ್ತ ಹಿನ್ನೆಲೆಯ ವಿರುದ್ಧ ಹೆಣೆಯಲಾದ "ಐ ಸಿ ಯು", ಸಂಪರ್ಕ ಮತ್ತು ನಿಜವಾಗಿಯೂ ಕಾಣಲ್ಪಡುವುದರ ಬಗ್ಗೆ ಶಾಂತವಾದ, ವಯಸ್ಸಿಗೆ ಬರುವ ಸಂಬಂಧದ ನಾಟಕವಾಗಿದೆ. ಈ ಚಿತ್ರವು ಯುವತಿಯೊಬ್ಬಳು ತನ್ನ ಸಂಬಂಧದಲ್ಲಿ ಕಠಿಣ ಹಂತವನ್ನು ಎದುರಿಸುವುದನ್ನು ಅನುಸರಿಸುತ್ತದೆ, ಅಲ್ಲಿ ಇಬ್ಬರೂ ಪಾಲುದಾರರು ಒಟ್ಟಿಗೆ ಇದ್ದರೂ ದೂರವಾಗುತ್ತಾರೆ. ಒಂದೇ ದಿನದ ಅವಧಿಯಲ್ಲಿ, ನಟನಾ ತರಗತಿಯ ವ್ಯಾಯಾಮವು ಅವಳನ್ನು ವಿರಾಮಗೊಳಿಸಲು, ಪ್ರತಿಬಿಂಬಿಸಲು ಮತ್ತು ತನ್ನದೇ ಆದ ಭಾವನಾತ್ಮಕ ಮಾದರಿಗಳನ್ನು ಎದುರಿಸಲು ಒತ್ತಾಯಿಸುತ್ತದೆ - ಇದು ಸ್ಪಷ್ಟತೆ ಮತ್ತು ಮರುಸಂಪರ್ಕದ ಕಡೆಗೆ ಪ್ರಮುಖ ಹೆಜ್ಜೆ ಇಡಲು ಅವಳನ್ನು ಕರೆದೊಯ್ಯುವುದೆ ಈ ಕಿರುಚಿತ್ರದ ಕಥಾಸಾರಾಂಶ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಈ ಕಿರುಚಿತ್ರ ಮೂಡಿಬಂದಿದೆ. ಸಹಕಾರ ನೀಡಿದ ತಂಡದ ಸದಸ್ಯರಿಗೆ ಧನ್ಯವಾದ ಎಂದರು ಮಿಂಚು ಜೋಶಿ.

"ಐ ಸಿ ಯು" ಕಿರುಚಿತ್ರದಲ್ಲಿ ನಟಿಸಿರುವ ವಿಷ್ಣು ರಾಮನ್, ರಿಷಿ ರಾಮನ್, ಸಂಗೀತ ನಿರ್ದೇಶಕ ಜುಬಿನ್ ಪಾಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

"ಮಂಡಲ" ಕಿರುಚಿತ್ರದ ಕುರಿತು ಮಾತನಾಡಿದ ನಿರ್ದೇಶಕ, ನಟ ರಿಷಿ ರಾಮನ್, "ಮಂಡಲ" ಎಂಬುದು ವಿದೇಶದಲ್ಲಿ ವಾಸಿಸುವ ಭಾರತೀಯ ದಂಪತಿಗಳ ಬಗ್ಗೆ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಅವರ ಸಾಂದರ್ಭಿಕ LSD ಪ್ರಯೋಗವು ಮತಿವಿಕಲ್ಪ, ಆನುವಂಶಿಕ ಆಘಾತ ಮತ್ತು ಭಾವನಾತ್ಮಕ ಹಿಂಸೆಯ ರಾತ್ರಿಯಾಗಿ ಸುರುಳಿಯಾಗುತ್ತದೆ. ಸಂಬಂಧದ ವಾದವು ದೇವ್‌ ನ ಬಾಲ್ಯದ ಪ್ರೇತಗಳೊಂದಿಗೆ - ಅವನ ಹೆತ್ತವರಲ್ಲಿ ಸಾಕಾರಗೊಂಡಿರುವ - ಅವಾಸ್ತವಿಕ ಮುಖಾಮುಖಿಯಾಗಿ ರೂಪಾಂತರಗೊಳ್ಳುತ್ತದೆ - ಚಿತ್ರವನ್ನು ನಿಕಟ ಮಾನಸಿಕ ಮುತ್ತಿಗೆಯಾಗಿ ಪರಿವರ್ತಿಸುತ್ತದೆ. ಇದು ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾಗಿದೆ. ಒಂದೇ ಮನೆಯಲ್ಲಿ ಚಿತ್ರೀಕರಣ ನಡೆದಿದೆ‌. ಕ್ರೌಡ್ ಫಂಡಿಂಗ್ ನಲಿ ಈ ಚಿತ್ರ ಮಾಡಲಾಗಿದೆ. ಮುಂದೆ ಹಿರಿತೆರೆಯಲ್ಲೂ ಚಿತ್ರ ನಿರ್ದೇಶಿಸುವ ಯೋಚನೆ ಇದೆ ಎಂದರು.     

 ಛಾಯಾಗ್ರಾಹಕ ಸಂಜಿತ್ ಸಿಂಗ್, ಸಂಕಲನಕಾರ ಮಹೀಂದ್ರ ಹಾಗೂ ಸಂಗೀತ ನಿರ್ದೇಶಕ ನಂದನ್ ಶ್ರೀನಿವಾಸ್ ಮುಂತಾದವರು "ಮಂಡಲ"ದ ಬಗ್ಗೆ ಮಾತನಾಡಿದರು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಈ ಕಿರುಚಿತ್ರ ಮೂಡಿಬಂದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.