2026-06-08 01:30:14

Two Indians die in Oman port | ಅಮೆರಿಕ ಇರಾನ್ ಸಂಘರ್ಷ ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು | Speed News Kannada

Two Indians die in Oman port | ಅಮೆರಿಕ ಇರಾನ್ ಸಂಘರ್ಷ ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು | Speed News Kannada

ನವದೆಹಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ತೈಲ ಸಾಗಣೆ ನೌಕೆ 'ಸೈಲೈಟ್' ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಕ್ಯಾ.ಅಶೀಷ್ ಕುಮಾ‌ರ್ ಮತ್ತು ಸಿಬ್ಬಂದಿ ದೀಲಿಪ್ ಸಿಂಗ್ ಮೃತಪಟ್ಟಿದ್ದಾರೆ.
ದೀಲಿಪ್ ಸಿಂಗ್ ರಾಜಸ್ಥಾನ ಮೂಲದವರು ಎಂದು ವರದಿಗಳು ತಿಳಿಸಿವೆ. ಈ ನೌಕೆ ಒಮಾನ್ ದೇಶಕ್ಕೆ ಸೇರಿದ್ದು ಎನ್ನಲಾಗಿದೆ. ಓಮನ್‌ನ ದುಕ್ಟ್ ಬಂಧರಿನಲ್ಲಿ ಡೋನ್ ಮೂಲಕ ಈ ದಾಳಿ ನಡೆಸಲಾಗಿದೆ. ಈ ನೌಕೆಯಲ್ಲಿದ್ದ ಹಲವರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ 15 ಭಾರತೀಯರು ಹಾಗೂ ಐವರು ಇರಾನಿಯನ್ನರು ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಾಳಿ ನಡೆಸಿದವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ, ಆದಾಗ್ಯೂ ಇರಾನ್ ಈ ಮಾಡಿದೆ ಎಂದು ಹೇಳಲಾಗುತ್ತಿದೆ. ಒಮಾನ್ ಸರ್ಕಾರ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.