2026-06-08 03:54:03

Trumps deadline for Iran | ಇರಾನ್‌ಗೆ ಟ್ರಂಪ್ ಡೆಡ್‌ಲೈನ್ ಯುದ್ಧ ನಡೆಯುತ್ತಾ 10 ದಿನಗಳ ಕೌಂಟ್‌ಡೌನ್ ಆರಂಭ | Speed News Kannada

Trumps deadline for Iran | ಇರಾನ್‌ಗೆ ಟ್ರಂಪ್ ಡೆಡ್‌ಲೈನ್ ಯುದ್ಧ ನಡೆಯುತ್ತಾ 10 ದಿನಗಳ ಕೌಂಟ್‌ಡೌನ್ ಆರಂಭ | Speed News Kannada

ವಾಷಿಂಗ್ಟನ್‌: ಅಮೆರಿಕಾ ಹಾಗೂ ಇರಾನ್‌ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಮೆರಿಕಾ ವಿಧಿಸಿರುವ ಪರಮಾಣು ಸ್ಥಗಿತ ಒಪ್ಪಂದಕ್ಕೆ ಇರಾನ್‌ ಒಪ್ಪುತ್ತಿಲ್ಲ, ಆದರೆ ಅಮೆರಿಕಾ ಪಟ್ಟು ಸಡಲಿಸುತ್ತಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಉಭಯ ದೇಶಗಳು ಎರಡು ಸುತ್ತಿನ ಮಾತುಕತೆ ನಡೆಸಿದರೂ ಫಲಿತಾಂಶ ಶೂನ್ಯ.
ಅಮೆರಿಕ-ಇರಾನ್‌ ನಡುವೆ ಯುದ್ಧ ನಡೆಯಲಿದೆಯೇ ಎಮಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಇರಾನ್‌ 10 ದಿನಗಳ ಡೆಡ್‌ ಲೈನ್‌ ಕೊಟ್ಟಿದ್ದಾರೆ
ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ಬೋರ್ಡ್ ಆಫ್ ಪೀಸ್ ಅಥವಾ ಗಾಜ ಶಾಂತಿ ಸ್ಥಾಪನಾ ಸಮಿತಿ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ಇರಾನ್‌ ಒಪ್ಪಂದ ಮಾಡಿಕೊಳ್ಳಲು ಕೇವಲ 10 ದಿನಗಳ ಕಾಲಾವಾಕಾಶವಿದೆ. ನಿರಾಕರಿಸಿದಲ್ಲಿ ಇರಾನ್‌ ಗೆ ಅತ್ಯಂತ ಕೆಟ್ಟ ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಸೀಮಿತ ಮಿಲಿಟರಿ ದಾಳಿ ಕೂಡ ಗಂಭೀರ ಪರಿಣಾಮಗಳನ್ನು ಬೀರಬಹುದು. ಇರಾನ್‌ನ ಪ್ರತೀಕಾರವು ಗಲ್ಫ್ ಪ್ರದೇಶ, ತೈಲ ಪೂರೈಕೆ ಮಾರ್ಗಗಳು ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಹಾರ್ಮುಜ್ ಜಲಸಂಧಿಯಂತಹ ಕಾರ್ಯತಂತ್ರದ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗುವುದರಿಂದ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಬಹುದು. ಇದಲ್ಲದೆ, ಪ್ರಾದೇಶಿಕ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಬೆಳೆಯುವ ಅಪಾಯ ಇನ್ನೂ ಇದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.