2026-06-08 03:57:37

Trump hits back at Tehran threat | ಟೆಹ್ರಾನ್‌ ಬೆದರಿಕೆಗೆ ಟ್ರಂಪ್‌ ತಿರುಗೇಟು | Speed news kannada

Trump hits back at Tehran threat | ಟೆಹ್ರಾನ್‌ ಬೆದರಿಕೆಗೆ ಟ್ರಂಪ್‌ ತಿರುಗೇಟು | Speed news kannada

ಅಮೆರಿಕದ ದಿಗ್ಬಂಧನ ಮುಂದುವರಿದರೆ ಗಲ್ಫ್ ವಲಯದ ವ್ಯಾಪಾರವನ್ನೇ ಸ್ಥಗಿತಗೊಳಿಸುವುದಾಗಿ ಇರಾನ್ ಮಿಲಿಟರಿ ಕಮಾಂಡ್‌ ಹೇಳಿತ್ತು . ಇದಕ್ಕೆ ತಿರುಗೇಟು ನೀಡಿರುವ ಅಧ್ಯಕ್ಷ ಟ್ರಂಪ್, ಹಾರ್ಮುಜ್ ಜಲಸಂಧಿ ಶಾಶ್ವತವಾಗಿ ತೆರೆದಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಬೀಜಿಂಗ್ ಈಗ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸದಿರಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಇರಾನ್ ಮೇಲೆ ಒತ್ತಡ ಹೇರಲು ಅಮೆರಿಕವು ಚೀನಾದ ಬೆಂಬಲವನ್ನೂ ಪಡೆದಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಜಲಸಂಧಿಯಲ್ಲಿ ಅಡಚಣೆಯಾದರೆ ಅದರಿಂದ ಚೀನಾಗೂ ನಷ್ಟವಿರುವುದರಿಂದ, ಬೀಜಿಂಗ್ ಈ ಬೆಳವಣಿಗೆಯಿಂದ ಸಂತೋಷವಾಗಲಿದೆ ಎಂಬುದು ಟ್ರಂಪ್ ಲೆಕ್ಕಾಚಾರವಾಗಿದೆ.ಒಂದೆಡೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಟೆಹ್ರಾನ್‌ನಲ್ಲಿ ಬೀಡುಬಿಟ್ಟಿದ್ದರೆ, ಇನ್ನೊಂದೆಡೆ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಾಳೆ ನಡೆಯಲಿರುವ ಇಸ್ರೇಲ್-ಲೆಬನಾನ್ ಸಭೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಆದರೆ ವಾಸ್ತವದಲ್ಲಿ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ಮತ್ತು ನೆಲದ ದಾಳಿಗೆ ಇದುವರೆಗೆ 2,100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ರಾಜತಾಂತ್ರಿಕ ಪ್ರಯತ್ನಗಳು ಒಂದೆಡೆಯಾದರೆ, ರಣರಂಗದಲ್ಲಿ ಶಸ್ತ್ರಾಸ್ತ್ರಗಳ ಸದ್ದು ಮಾತ್ರ ನಿಲ್ಲುತ್ತಿಲ್ಲ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.