2026-06-08 01:20:05

Trisha visits future CM Vijays residence | ಭವಿಷ್ಯದ ಸಿಎಂ ವಿಜಯ್ ನಿವಾಸಕ್ಕೆ ತ್ರಿಶಾ ಭೇಟಿ ಕೋಟಿ ಕೋಟಿ ಆಸ್ತಿ ಜೊತೆಗೆ ನಟಿಯ ಹೆಸರು ವೈರಲ್ | Speed News Kannada

Trisha visits future CM Vijays residence | ಭವಿಷ್ಯದ ಸಿಎಂ ವಿಜಯ್ ನಿವಾಸಕ್ಕೆ ತ್ರಿಶಾ ಭೇಟಿ ಕೋಟಿ ಕೋಟಿ ಆಸ್ತಿ ಜೊತೆಗೆ ನಟಿಯ ಹೆಸರು ವೈರಲ್ | Speed News Kannada

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿದ ಬೆನ್ನಲ್ಲೇ, ನಟಿ ತ್ರಿಶಾ ಕೃಷ್ಣನ್ ಹೆಸರು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ವಿಜಯ್ ಅವರ ರಾಜಕೀಯ ಯಶಸ್ಸಿನ ಸಂಭ್ರಮದ ನಡುವೆ, ಇಬ್ಬರ ಸ್ನೇಹ ಮತ್ತು ಮದುವೆ ಕುರಿತ ಗುಸುಗುಸುಗಳು ಹೊಸ ಮಟ್ಟಕ್ಕೆ ತಲುಪಿವೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ತ್ರಿಶಾ ವಿಜಯ್ ನಿವಾಸಕ್ಕೆ ಭೇಟಿ ನೀಡಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ಮನೆ ಹೊರಗೆ ತ್ರಿಶಾ ಕಾರು ಕಾಣಿಸಿಕೊಂಡ ಬೆನ್ನಲ್ಲೇ, "ಚುನಾವಣೆ ಬಳಿಕ ಈ ಜೋಡಿ ಮದುವೆಯಾಗಲಿದೆ" ಎಂಬ ಮಾತುಗಳು ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಹರಿದಾಡತೊಡಗಿವೆ. ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ದಶಕಗಳಿಂದ ಮಿಂಚುತ್ತಿರುವ ತ್ರಿಶಾ ಕೃಷ್ಣನ್ ಕೇವಲ ಗ್ಲಾಮರ್ ಕ್ಲೀನ್ ಮಾತ್ರವಲ್ಲ, ಕೋಟ್ಯಾಂತರ ಆಸ್ತಿಯ ಒಡೆಯತಿಯೂ ಹೌದು. ವರದಿಗಳ ಪ್ರಕಾರ ತ್ರಿಶಾ ಒಟ್ಟು ಸುಮಾರು 85 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಚೆನ್ನೈನಲ್ಲಿ 10 ರಿಂದ 12 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ, ಹೈದರಾಬಾದ್‌ನಲ್ಲಿ ಮತ್ತೊಂದು ದುಬಾರಿ ಮನೆ, ಜೊತೆಗೆ ಮರ್ಸಿಡಿಸ್ ಬೆನ್ಸ್ ಎಸ್ ಕ್ಲಾಸ್, ಬಿಎಂಡಬ್ಲ್ಯು 5 ಸೀರಿಸ್ ಮತ್ತು ರೇಂಜ್ ರೋವರ್ ಇವೊಕ್‌ನಂತಹ ಲಕ್ಸುರಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಸಾಲಾಗಿ ನಿಂತಿವೆ.
ರಾಜಕೀಯ ಚರ್ಚೆಗಳ ಮಧ್ಯೆಯೂ ತ್ರಿಶಾ ಸಿನಿರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾದಲ್ಲಿ ಕಮಲ್ ಹಾಸನ್ ಮತ್ತು ಸಿಲಂಬರಸನ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ "ಭವಿಷ್ಯದ ಮುಖ್ಯಮಂತ್ರಿ" ಎಂದು ಬಿಂಬಿತವಾಗುತ್ತಿರುವ ವಿಜಯ್ ಅವರ ಗೆಲುವಿನ ಕ್ಷಣದಲ್ಲಿ ತ್ರಿಶಾ ಹೆಸರು ಮತ್ತೆ ತಳುಕು ಹಾಕಿಕೊಂಡಿರುವುದು ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. ಇಬ್ಬರ ಸಂಬಂಧದ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ "ವಿಜಯ್-ತ್ರಿಶಾ" ಚರ್ಚೆ ಫುಲ್ ಹಾಟ್ ಟಾಪಿಕ್ ಆಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.