ಬೆಂಗಳೂರು ಜೆಪಿ ನಗರ 24ನೇ ಮೇನ್ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ನಿನ್ನೆ ಸಂಜೆ ನಡೆದ ಈ ಘಟನೆ ಬಳಿಕ 12 ಗಂಟೆಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ.ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರದ ಕೊಂಬೆಗಳು ವಾಹನಗಳಿಗೆ ತಗುಲಿ ತೊಂದರೆ ಉಂಟುಮಾಡುತ್ತಿದ್ದು, BMTC ಬಸ್‌ನ ಸೈಡ್ ಮಿರರ್ ಕೂಡ ಹಾನಿಯಾಗಿದೆ. ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.