2026-03-07 05:01:53

Trade Deal With US | ಅಮೆರಿಕ ಜತೆ ವ್ಯಾಪಾರ ಒಪ್ಪಂದ ರಷ್ಯಾ ತೈಲ ಖರೀದಿಯಿಂದ ಹಿಂದೆ ಸರಿಯುತ್ತಿರುವ ಭಾರತ | Speed News Kannada

Trade Deal With US | ಅಮೆರಿಕ ಜತೆ ವ್ಯಾಪಾರ ಒಪ್ಪಂದ ರಷ್ಯಾ ತೈಲ ಖರೀದಿಯಿಂದ ಹಿಂದೆ ಸರಿಯುತ್ತಿರುವ ಭಾರತ | Speed News Kannada

ನವದೆಹಲಿ: ಭಾರತದ ತೈಲ ಸಂಸ್ಕರಣಾ ಘಟಕಗಳು ರಷ್ಯಾದಿಂದ ತೈಲ ಖರೀದಿಯನ್ನು ತಪ್ಪಿಸುತ್ತಿದ್ದು, ದೀರ್ಘ ಕಾಲ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದ್ದಾರೆ ಎಂದು ಸಂಸ್ಕರಣೆ ಮತ್ತು ವ್ಯಾಪಾರ ಮೂಲಗಳು ಹೇಳಿವೆ. ಇದು ಅಮೆರಿಕದೊಂದಿಗೆ ವ್ಯಾಪಾರ ಇಪ್ಪಂದಕ್ಕೆ ಸಹಾಯ ಮಾಡಲಿದೆ ಎಂದು ನಂಬಲಾಗಿದೆ.ವ್ಯಾಪಾರ ಒಪ್ಪಂದ ಚೌಕಟ್ಟು ಅಂತಿಮ, ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಮುಂತಾದ ಕಂಪನಿಗಳು ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ರವಾನೆಯಾಗಬೇಕಿದ್ದ ರಷ್ಯಾದ ತೈಲ ಖರೀದಿ ನಿಲ್ಲಿಸಿವೆ ಎಂದು ಸಂಸ್ಕರಣಾ ಕಂಪನಿಗಳನ್ನು ಸಂಪರ್ಕಿಸಿದ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಈ ಕಂಪನಿಗಳು ಈಗಾಗಲೇ ರಷ್ಯಾದಿಂದ ತೈಲ ಖರೀದಿ ಮಾಡಿದ್ದು, ಮಾರ್ಚ್‌ನಲ್ಲಿ ರವಾನೆಯಾಗಬೇಕಿತ್ತು ಎಂದು ಮೂಲಗಳಿಂದ ಗೊತ್ತಾಗಿದೆ. ಹೆಚ್ಚಿನ ಸಂಸ್ಕರಣಾಗಾರರು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದ್ಧಾರೆ. ಈ ಬಗ್ಗೆ ಮಾಹಿತಿ ಬಯಸಿ ಕಂಪನಿಗಳು ಹಾಗೂ ಇಂಧನ ಸಚಿವಾಲಯವನ್ನು ಸಂಪರ್ಕಿಸಿದರೂ, ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಶನಿವಾರ ಈ ಬಗ್ಗೆ ವಾಣಿಜ್ಯ ಸಚಿವರನ್ನು ಪ್ರಶ್ನಿಸಿದಾಗ ವಿದೇಶಾಂಗ ಸಚಿವರಲ್ಲಿ ಕೇಳಿ ಎಂದು ಹೇಳಿದ್ದರು.ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ 'ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಕ್ಕೆ ಇಂಧನ ಭದ್ರತೆಯನ್ನು ಖಚಿತಿಪಡಿಸಿಕೊಳ್ಳಲು ಮಾರುಕಟ್ಟೆ ಸ್ಥಿತಿಗತಿ ಹಾಗೂ ಬದಲಾಗುತ್ತಿರುವ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಅನುಗುಣವಾಗಿ ತೈಲ ಖರೀದಿಗೆ ವಿವಿಧ ಮೂಲಗಳನ್ನು ಆಶ್ರಯಿಸುವುದು ನಮ್ಮ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಣ ವ್ಯಾಪಾರ ಒಪ್ಪಂದ ಚೌಕಟ್ಟಿನಲ್ಲಿ ರಷ್ಯಾ ತೈಲ ಖರೀದಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿದ್ದರೂ, ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಭಾರತದ ಮೇಲೆ ಶೇ 25ರಷ್ಟು ಸುಂಕ ಹೇರಿದ್ದಾಗಿ ಹೇಳಿದ್ದರು. ಅಲ್ಲದೆ 'ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಮಾಸ್ಕೋದಿಂದ ನೇರ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧತೆ ವ್ಯಕ್ತಪಡಿಸಿದೆ' ಎಂದು ಟ್ರಂಪ್ ವ್ಯಾಪಾರ ಚೌಕಟ್ಟು ಘೋಷಣೆಯಾದ ಬಳಿಕ ಹೇಳಿದ್ದರು.ಭಾರತ-ಪಾಕ್ ಯುದ್ಧ ಇತ್ಯರ್ಥ: ವ್ಯಾಪಾರ ಒಪ್ಪಂದ ಬಳಿಕವೂ ಟ್ರಂಪ್ ಅದೇ ರಾಗ! ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. 2022ರಲ್ಲಿ ಉಕ್ರೇನ್ ಜೊತೆಗೆ ರಷ್ಯಾ ಯುದ್ಧ ಆರಂಭಿಸಿದ ಬಳಿಕ, ಭಾರತವು ರಷ್ಯಾದಿಂದ ಕಡಿಮೆ. ದರದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿತ್ತು. ತೈಲದ ಆದಾಯವನ್ನು ಉಕ್ರೇನ್ ಮೇಲಿನ ಯುದ್ಧಕ್ಕೆ ಬಳಸುತ್ತಿದೆ ಎಂದು ಹಲವು ರಾಷ್ಟ್ರಗಳು ಬಹಿಷ್ಕರಿಸಿದ್ದರಿಂದ ಭಾರತದ ನಿರ್ಧಾರಕ್ಕೆ ಪಾಶ್ಚಿಮಾತ್ಯ ದೇಶಗಳಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಭಾರತದ 'ನಯಾರಾ' ಕಂಪನಿಯು ರಷ್ಯಾದ ತೈಲವನ್ನೇ ನೆಚ್ಚಿಕೊಂಡಿದ್ದು, ದಿನಕ್ಕೆ 4 ಲಕ್ಷ ಬ್ಯಾರೆಲ್ ತೈಲವನ್ನು ಸಂಸ್ಕರಿಸುತ್ತದೆ. ಕಳೆದ ಜುಲೈನಲ್ಲಿ ಐರೋಪ್ಯ ಒಕ್ಕೂಟವು ನಯಾರಾಕ್ಕೆ ನಿರ್ಬಂಧ ಹೇರಿದ್ದರಿಂದ ಬೇರೆ ಕಂಪನಿಗಳೂ ಕೂಡ ತೈಲ ಪೂರೈಕೆಯನ್ನು ನಿಲ್ಲಿಸಿದ್ದವು. ಹೀಗಾಗಿ ನಯಾರಾಗೆ ರಷ್ಯಾ ತೈಲ ಖರೀದಿಗೆ ಅನುಮತಿ ನೀಡಬಹುದು ಎಂದು ಮೂಲಗಳು ಹೇಳಿವೆ.ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮಾರ್ಚ್‌ನಲ್ಲಿ ಸಹಿ: ಪೀಯೂಷ್ ಗೋಯಲ್ ಸದ್ಯ ನಯಾರಾದ ಸಂಸ್ಕರಣಾ ಘಟಕಗಳು ಬಹುದಿನಗಳಿಂದ ನಿರ್ವಹಣೆಯಲ್ಲಿರುವುದರಿಂದ ಏಪ್ರಿಲ್‌ನಲ್ಲಿ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ ಎಂದು ಈ ಬಗ್ಗೆ ಮಾಹಿತಿ ಇರುವವರು ಹೇಳಿದ್ದಾರೆ. ಆದರೆ ಈ ಬಗ್ಗೆ ನಯಾರಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರ ಸಲಹೆ ನೀಡಿದರೆ ಮಾತ್ರ ರಷ್ಯಾದಿಂದ ತೈಲ ಖರೀದಿ ಆದೇಶ ನೀಡಲು ತೈಲ ಕಂಪನಿಗಳು ಯೋಚಿಸಿವೆ ಎಂದು ಮೂಲಗಳು ತಿಳಿಸಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.