2026-06-08 01:23:45

Toxics first song release | ಟಾಕ್ಸಿಕ್‌ನ ಮೊದಲ ಹಾಡು ರಿಲೀಸ್ ತಬಾಹಿ ಅಂದ್ರೆ ಅರ್ಥ ಏನು ಗೊತ್ತಾ | Speed News Kannada

Toxics first song release | ಟಾಕ್ಸಿಕ್‌ನ ಮೊದಲ ಹಾಡು ರಿಲೀಸ್ ತಬಾಹಿ ಅಂದ್ರೆ ಅರ್ಥ ಏನು ಗೊತ್ತಾ | Speed News Kannada

ಟಾಕ್ಸಿಕ್ ಮೊದಲ ಹಾಡು ಬಹುನಿರೀಕ್ಷಿತ ರಾಂಕಿಂಗ್ ಸ್ಟಾರ್ ಯಶ್ ಸಿನಿಮಾದ ಟಾಕ್ಸಿಕ್ ಸಿನಿಮಾದ ಹಾಡು ರಿಲೀಸ್ ಆಗಿದೆ..ಯಶ್ ಹಾಗೂ ಕಿಯಾರಾ ಅಡ್ವಾನಿ ಅವರ ಜೊತೆ ಸಖತ್ ಬೋಲ್ಡ್ ಲುಕ್ ಕೊಟ್ಟಿರುವ ಹಾಡನ್ನ ರಿಲೀಸ್ ಮಾಡಲಾಗಿದೆ..ದೆ. ಯಶ್ ಹಾಗೂ ಕಿಯಾರ ಅವರನ್ನು ಒಳಗೊಂಡ ಹಾಡು ತಬಾಹಿ ರಿಲೀಸ್ ಆಗಿದ್ದು ರೊಮ್ಯಾಂಟಿಕ್ ಮೆಲೊಡಿಯಾಗಿ ಈ ಹಾಡು ಬಂದಿದೆ. ಈ ಹಾಡಿನಲ್ಲಿ ಪದೇ ಪದೇ ತಬಾಹಿ ಅನ್ನುವ ಪದ ಕೇಳಿ ಬರುತ್ತಿದೆ. ಈ ಹಾಡು ಒಂದು ಸಲ ಕೇಳಿದರೆ ಪಕ್ಕಾ ರೊಮ್ಯಾಂಟಿಕ್ ಹಾಡು ಅನ್ನೋದು ಗೊತ್ತಗುತ್ತದೆ.. ಈ ಹಾಡಿನಲ್ಲಿ ತಬಾಹಿ ಪದ ಬಹಳ ಹೈಲೈಟ್ ಆಗಿದೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲಿ ಅಲೊಹೊಮೊರ ಎನ್ನುವ ಪದ ತಂದ ಹಾಗೆಯೇ ಟಾಕ್ಸಿಕ್‌ನಲ್ಲಿ ತಬಾಹಿ ಎನ್ನುವ ಒಂದು ಪದ ಸಖತ್ ಹೈಲೈಟ್ ಆಗಿದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ತಬಾಹಿ ಅನ್ನುವ ಪದ ಅರ್ಥವೇನು ಅಂತಾ ಹುಡುಕಾಟ ಶುರುವಾಗಿದೆ..
ಯಶ್ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದ ಮೊದಲ ಹಾಡನ್ನು ಕೇಳಿ ಫುಲ್ ಖುಷ್ ಆಗಿದ್ದಾರೆ..ತಬಾಹಿ ಎನ್ನುವುದು ಒಂದು ಹಿಂದಿ ಪದವಾಗಿದ್ದು ಉರ್ದು ಭಾಷೆಯಲ್ಲಿಯೂ ಈ ಪದ ಬಳಕೆ ವ್ಯಾಪಕವಾಗಿದೆ ಎನ್ನಲಾಗ್ತಿದೆ.. ಈ ಪದ ಅರ್ಥ ನಾಶ ಎಂದರ್ಥ ಅಷ್ಟೇ ಅಲ್ಲದೇ ನಾಶ, ವಿನಾಶ, ವಿಪತ್ತು ಎನ್ನುವ ಅರ್ಥವೂ ಇದೆ. ಮಾತ್ರವಲ್ಲದೆ ತಬಾಹಿ ಪದ ಅರ್ಥ ಅವಳು ಹೋದ ಮೇಲೆ ಅವನು ನಾಶವಾದನು ಎನ್ನುವ ರೀತಿ ಪ್ರೀತಿಯ ಭಾವದಲ್ಲಿಯೂ ಬಳಲಾಗ್ತಿದೆ. ಈ ಹಾಡಿನಲ್ಲಿ ಮ್ಯೂಸಿಕ್ ಅಬ್ಬರವು ಜೋರಾಗಿದೆ. ವಿಶಾಲ್ ಮಿಶ್ರಾ ಗಾಯನವೂ ಜೋರಾಗಿದೆ. ಎಲ್ಲರಿಗೂ ರೀಚ್ ಆಗುವ ರೀತಿನೇ ಇದೆ. ಸದ್ಯ ಟಾಕ್ಸಿಕ್ ಸಿನಿಮಾದ ಮೊದಲ ಹಾಡಿನಲ್ಲಿ ತಬಾಹಿ ಎಂದು ಹಾಡಿದ್ದು ಟಾಕ್ಸಿಕ್ ಫ್ಯಾನ್ಸ್ ಒಳ್ಳೆ ರೆಸ್ಪಾನ್ಸ್ ನೀಡಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಿದ್ದು ಸದ್ಯ ಹಾಡಿನ ಆಡಿಯೋ ಮಾತ್ರ ಬಿಟ್ಟಿದ್ದು ಹಾಡಿನ ವಿಡಿಯೋ ಕೂಡಾ ಬೇಕಿತ್ತು ಅಂತಾ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.