2026-06-08 01:26:58

Toxic Music Mega Blast Dhurandhar 2 gets a shock of Rs 15 crore | ಟಾಕ್ಸಿಕ್ ಮ್ಯೂಸಿಕ್ ಮಹಾ ಸ್ಪೋಟ 42 ಕೋಟಿ ಡೀಲ್ ಮೂಲಕ ಧುರಂಧರ್ 2ಗೆ 15 ಕೋಟಿ ಶಾಕ್ | Speed News Kannada

Toxic Music Mega Blast Dhurandhar 2 gets a shock of Rs 15 crore | ಟಾಕ್ಸಿಕ್ ಮ್ಯೂಸಿಕ್ ಮಹಾ ಸ್ಪೋಟ 42 ಕೋಟಿ ಡೀಲ್ ಮೂಲಕ ಧುರಂಧರ್ 2ಗೆ 15 ಕೋಟಿ ಶಾಕ್ | Speed News Kannada

ಟಾಕ್ಸಿಕ್ ಮತ್ತು ಧುರಂಧರ್ 2 ಕುರಿತ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿರುವ ನಡುವೆ ಮ್ಯೂಸಿಕ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಟಾಕ್ಸಿಕ್ ಚಿತ್ರದ ಹಾಡಿನ ಹಕ್ಕುಗಳು 42 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಇದು ದಕ್ಷಿಣ ಚಿತ್ರರಂಗದ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಚಿತ್ರದಲ್ಲಿ ಒಟ್ಟು 6 ಹಾಡುಗಳು ಇರಲಿವೆ. ರವಿ ಬಸೂರು ಹಿನ್ನೆಲೆ ಸಂಗೀತದ ಜೊತೆಗೆ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ನಾಲ್ಕು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ತನಿಷ್ ಬಾಗ್ನಿ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಈ ಬಹು ಪ್ರತಿಭೆಗಳ ಸಂಗಮದಿಂದ ಚಿತ್ರದ ಮ್ಯೂಸಿಕ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪರಿಣಾಮವಾಗಿ ಮ್ಯೂಸಿಕ್ ಹಕ್ಕುಗಳು 42 ಕೋಟಿ ರೂಪಾಯಿಗೆ ಖರೀದಿಯಾಗಿವೆ. ಇದಕ್ಕೆ ಹೋಲಿಸಿದರೆ ಧುರಂಧರ್ 2 ಚಿತ್ರದ ಹಾಡಿನ ಹಕ್ಕುಗಳು 27 ಕೋಟಿ ರೂಪಾಯಿಗೆ ಮಾರಾಟವಾಗಿವೆ. ಅಂದರೆ ಟಾಕ್ಸಿಕ್ ಚಿತ್ರಕ್ಕೆ 15 ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಮ್ಯೂಸಿಕ್ ವ್ಯವಹಾರದಲ್ಲೇ ಟಾಕ್ಸಿಕ್ ಸ್ಪಷ್ಟ ಮೇಲುಗೈ ಸಾಧಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.