2026-07-23 09:10:04

Toll tax hike|ವಾಹನ ಸವಾರರ ಜೇಬಿಗೆ ಕತ್ತರಿ: ಏಪ್ರಿಲ್ 1ರಿಂದ ಟೋಲ್ ದರ ದುಬಾರಿ!|Speed news kannad

Toll tax hike|ವಾಹನ ಸವಾರರ ಜೇಬಿಗೆ ಕತ್ತರಿ: ಏಪ್ರಿಲ್ 1ರಿಂದ ಟೋಲ್ ದರ ದುಬಾರಿ!|Speed news kannad

ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಅಧಿಕೃತವಾಗಿ ಹೆಚ್ಚಳವಾಗುತ್ತಿದೆ. ಎಲ್‌ಪಿಜಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಕಹಿ ಸುದ್ದಿ ಹೊರಬಿದ್ದಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಕರ್ನಾಟಕದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಪರಿಷ್ಕರಿಸಿಲಾಗಿದೆ.

ಏಪ್ರಿಲ್‌ ಮೊದಲ ದಿನದಿಂದಲೇ ಟೋಲ್‌ ದರಗಳನ್ನು ಪರಿಷ್ಕರಿಸಲಾಗುತ್ತದೆ. ಆದೇ ರೀತಿ ಈ ವರ್ಷವೂ ಪರಿಷ್ಕರಣೆ ಮಾಡಿ ದರ ಏರಿಕೆ ಮಾಡಲಾಗಿದ್ದು, ಶೇಕಡಾ 4ರಿಂದ 5ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಎಂದು ಬಲ್ಲ ಮೂಲಗಳು ತಿಳಿಸಿವೆ. ಅಧಿಕೃತ ದರ ಏರಿಕೆಯಿಂದ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಗೆ ಸಂಕಷ್ಟ ಎದುರಾಗಿದೆ. ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಒಟ್ಟಾರೆ, ಈ ದರ ಏರಿಕೆ ಸಾಮಾನ್ಯ ಜನರ ದಿನನಿತ್ಯದ ಪ್ರಯಾಣ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಿಶೇಷವಾಗಿ ಪ್ರತಿದಿನ ಹೆದ್ದಾರಿ ಬಳಸುವ ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಇದರ ಪರಿಣಾಮ ಹೆಚ್ಚು ಬೀರಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.