2026-06-08 04:43:07

Today is Radhika Pandits birthday | ಇವತ್ತು ರಾಧಿಕಾ ಪಂಡಿತ್ ಹುಟ್ಟುಹಬ್ಬ ಅತ್ತೆ ಹೇಗೆ ವಿಷ್‌ ಮಾಡಿದ್ದಾರೆ ಗೊತ್ತೇ | Speed News Kannada

Today is Radhika Pandits birthday | ಇವತ್ತು ರಾಧಿಕಾ ಪಂಡಿತ್ ಹುಟ್ಟುಹಬ್ಬ ಅತ್ತೆ ಹೇಗೆ ವಿಷ್‌ ಮಾಡಿದ್ದಾರೆ ಗೊತ್ತೇ | Speed News Kannada

ಸ್ಯಾಂಡಲ್‌ವುಡ್‌ನ ಸಿಂಡ್ರೆಲಾ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಾರ್ಚ್ 7 ರಂದು ಇವರ ಜನ್ಮ ದಿನ. ಸಿನಿಮಾಗಳಲ್ಲಿ ನಟಿಸೋ ಸಮಯದಲ್ಲಿ ಅಂದು ಇವರ ಮನೆ ಮುಂದೆ ಫ್ಯಾನ್ಸ್ ಜಮಾಯಿಸುತ್ತಿದ್ದರು. ಕೇಕ್ ತಂದು ಕಟ್ ಮಾಡಿಸಿ ಖುಷಿಪಡುತ್ತಿದ್ದರು. ರಾಧಿಕಾ ಪಂಡಿತ್ ಬರ್ತ್‌ಡೇ ಅಂದ್ರೆ, ರಾಕಿ ಭಾಯ್ ಯಶ್ ಕೂಡ ಬಂದು ವಿಶ್ ಮಾಡ್ತಿದ್ದರು. ಆಗಿನ್ನು ಮದುವೆ ಆಗಿರಲಿಲ್ಲ. ಲವ್ ಇದೆ ಅನ್ನುವ ಮ್ಯಾಟರ್ ಕೂಡ ಗೊತ್ತಿರಲಿಲ್ಲ. ಆದರೂ ಯಶ್ ವಿಶ್ ಮಾಡಿ ಹೋಗ್ತಿದ್ದರು.
ಈಗ ರಾಧಿಕಾ ಪಂಡಿತ್‌ ಅತ್ತೆ ಪುಷ್ಪಮ್ಮ ಶುಭಾಶಯ ಕೋರಿದ್ದಾರೆ. ಬರ್ತ್ಡೇಗೆ ಸೊಸೆಗೆ ಯಶ್ ಅಮ್ಮ ಏನಂತ ವಿಶ್ ಮಾಡಿದ್ರು? ಏನಂತ ಹಾರೈಸಿದ್ರು? ಗೊತ್ತಾ? ನಮ್ಮ ಅದ್ಭುತ ಸೊಸೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಜೀವನ ಯಾವಾಗಲೂ ಖುಷಿ ಹಾಗೂ ಆಶೀರ್ವಾದಗಳಿಂದ ತುಂಬಿರಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಸೊಸೆಯ ಜೊತೆಗಿದ್ದ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ಸಿನಿಮಾ ಜೀವನ ಯಶ್ ಜೊತೆಗೆ ಶುರು ಆಗಿದೆ. ಮೊಗ್ಗಿನ ಮನಸು ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ಪೇರ್ ಆಗಿದ್ದರು. ಆದರೆ, ಯಶ್ ಈ ಮೊದಲೇ ಜಂಭದ ಹುಡುಗಿ ಚಿತ್ರ ಮಾಡಿದ್ದರು. ಇದು ಇವರ ಮೊದಲ ಚಿತ್ರವೇ ಆಗಿದೆ. ಹಾಗೆ ಶುರು ಆದ ರಾಧಿಕಾ ಸಿನಿಮಾ ಕರಿಯರ್‌ ಅಲ್ಲಿ ಹಲವಾರು ಅದ್ಭುತ ಚಿತ್ರಗಳೂ ಬಂದಿವೆ. ಅದ್ಧೂರಿ, ಅಲೆಮಾರಿ, ಹುಡುಗರು, ಕೃಷ್ಣನ್ ಲವ್ ಸ್ಟೋರಿ, ಡ್ರಾಮಾ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಈ ಚಿತ್ರಗಳಲ್ಲಿ ರಾಧಿಕಾ ಪಂಡಿತ್ ತಮ್ಮದೇ ಛಾಪು ಮೂಡಿಸಿದ್ದಾರೆ.
ರಾಧಿಕಾ ಪಂಡಿತ್ ಸಿನಿ ಕರಿಯರ್‌ಅಲ್ಲಿ ಸೀರಿಯಲ್‌ಗಳೂ ಮಾಡಿದ್ದಾರೆ. ಅದರಲ್ಲಿ ನಂದಗೋಕುಲ ಕಾದಂಬರಿ ಸುಮಂಗಲಿ ಸೀರಿಯಲ್ ಅಲ್ಲಿ ನಟಿಸಿದ್ದಾರೆ. ಈ ಮೂರು ಸೀರಿಯಲ್‌ಗಳ ಮೂಲಕ ರಾಧಿಕಾ ಪಂಡಿತ್ ಕಿರುತೆರೆಯಲ್ಲೂ ಮಿಂಚಿದರು.
ಆದರೆ, ರಾಧಿಕಾ ಪಂಡಿತ್ ಅವರಿಗೆ ಆರಂಭದಲ್ಲಿ ಅವಕಾಶಗಳು ಬರ್ತಾ ಇದ್ದವು. ಹಾಗಂತ ಸಿಕ್ಕೇ ಬಿಡ್ತು ಅಂತ ಅಲ್ವೇ ಅಲ್ಲ. ಬಂದ ಆಫರ್‌ಗಳಲ್ಲಿ ರಾಧಿಕಾ ಅವರನ್ನ ರಿಜೆಕ್ಟ್ ಮಾಡಿರೋ ಚಿತ್ರಗಳು ಇವೆ. ಕಾರಣ, ರಾಧಿಕಾ ಪಂಡಿತ್ ಅವರು ತುಂಬಾನೆ ಸಣ್ಣ ಇದ್ದರು. ಅಷ್ಟೇನೂ ದಪ್ಪ ಇರಲಿಲ್ಲ. ಹಾಗಾಗಿಯೇ ನೀವು ತುಂಬಾನೆ ಸಣ್ಣ ಇದ್ದೀರಿ ಅಂತ ಅನೇಕರು ರಿಜೆಕ್ಟ್ ಮಾಡಿರೋದು ಇದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.