ಪಶ್ಚಿಮ ಬಂಗಾಳ ಮತ ಎಣಿಕೆಗೆ ಕೇಂದ್ರ ಸರ್ಕಾರದ ಸಿಬ್ಬಂದಿ ಬಳಕೆಯ ಕುರಿತು ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ವಜಾಗೊಳಿಸಿದೆ.ಮಮತ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಈ ಮೊದಲು ಹೈಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿತ್ತು.ವಿಚಾರಣೆ ವೇಳೆ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಕ್ಷಗಳ ಪ್ರತಿನಿಧಿಗಳು ಹಾಜರಿರುತ್ತಾರೆ ಮತ್ತು ಚುನಾವಣಾ ಆಯೋಗದ ನಿಯಮಗಳಿಗೆ ಇದು ವಿರುದ್ಧವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಟಿಎಂಸಿ ಪರವಾಗಿ ಕಪಿಲ್ ಸಿಬಲ್ ಹಾಗೂ ಮೀನಾಕ್ಷಿ ಅರೋರ ವಾದ ಮಂಡಿಸಿದರೆ, ಆಯೋಗದ ಪರವಾಗಿ ಡಿ.ಎಸ್ ನಾಯ್ಡು ಪ್ರತಿವಾದಿಸಿದರು.ನ್ಯಾಯಮೂರ್ತಿ ಬಾಗ್ಚಿ ಅವರಿದ್ದ ಪೀಠ, ಮತ ಎಣಿಕೆ ಮೇಲ್ವಿಚಾರಣೆಗೆ ಈಗಾಗಲೇ ಸಾಕಷ್ಟು ವ್ಯವಸ್ಥೆಗಳಿದ್ದು, ಇಂತಹ ನಿರ್ಧಾರಗಳು ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರುತ್ತವೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.