2026-03-07 05:51:03

Three Sisters Commit Suicide | ಆನ್‌ಲೈನ್ ಗೇಮ್‌ ಆಡಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮೂವರು ಸಹೋದರಿಯರು | Speed News Kannada

Three Sisters Commit Suicide | ಆನ್‌ಲೈನ್ ಗೇಮ್‌ ಆಡಬೇಡಿ ಎಂದು ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮೂವರು ಸಹೋದರಿಯರು | Speed News Kannada

ಗಾಜಿಯಾಬಾದ್: ಆನ್‌ಲೈನ್ ಗೇಮ್‌ ಆಡಬೇಡಿ ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮೂವರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಈ ಸಹೋದರಿಯರು ತಾವು ವಾಸಿಸುತ್ತಿದ್ದ ಅಪಾರ್ಟ್‌ ಮೆಂಟ್‌ ನ ಒಂಭತ್ತನೇ ಮಹಡಿಯಿಂದ ಬುಧವಾರ ನಸುಕಿನ ಜಾವ 2 ಗಂಟೆಗೆ ಹಾರಿ ಆತ್ಮಹ್ಯೆಗೆ ಶರಣಾಗಿದ್ದಾರೆ. ಇವರನ್ನು ಪಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ.
ಈ ಮೂವರು ಸಹೋದರಿಯರು ವಿಪರೀತ ಆನ್‌ ಲೈನ್‌ ಗೇಮ್‌  ಆಡುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಆನ್‌ ಲೈನ್‌ ಗೇಮ್‌ ಆಡಲು ಕಲಿತುಕೊಂಡಿದ್ದ ಇವರು ಅದನ್ನೇ ಚಟವಾಗಿಸಿಕೊಂಡಿದ್ದರು.  ಪೋಷಕರು ಬುದ್ದಿ ಹೇಳಿ ಶಾಲೆಗೆ ನಿಯಮಿತವಾಗಿ ಹೋಗುವಂತೆ ತಿಳಿಸಿದ್ದಕ್ಕೆ ಮೂವರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನ್‌ಲೈನ್ ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ ಹೆಚ್ಚು ಆಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗಾಜಿಯಾಬಾದ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.