ಈ ವಿಗ್ರಹಗಳ ಮೂಲದ ಬಗ್ಗೆ ಸಂಶೋಧನೆ ನಡೆಸಿದ ಬಳಿಕ ಇವುಗಳನ್ನು ಮರಳಿಸುತ್ತಿರುವುದಾಗಿ ವಾಷಿಂಗ್ಟನ್ ದ ಸ್ಮಿತ್‌ಸೋನಿಯನ್ ನ್ಯಾಶನಲ್ ಮ್ಯೂಸಿಯಂ ಆಫ್ ಏಷಿಯನ್ ಆರ್ಟ್ ಪ್ರಕಟಿಸಿದೆ. ನ್ಯೂಯಾರ್ಕ್ ವಿವಿಧ ದೇಗುಲಗಳಿಂದ ಅಕ್ರಮವಾಗಿ ಸಾಗಿಸಲಾಗಿದ್ದ 3 ಐತಿಹಾಸಿಕ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ನಿರ್ಧರಿಸಿದೆ.ತಮಿಳುನಾಡಿನ ತಂಜಾವೂರು ಜಿಲ್ಲೆಯ ಶ್ರೀ ಭವ ಔಷಧೇಶ್ವರ ದೇವಸ್ಥಾನಕ್ಕೆ ಸೇರಿದ್ದ ಕ್ರಿ.ಶ. 990ರ ಚೋಳರ ಕಾಲದ ಶಿವ ನಟರಾಜ, ಮನ್ನಾರ್ಗುಡಿ ತಾಲೂಕಿನ ಅಲತ್ತೂರು ಗ್ರಾಮದ ವಿಶ್ವನಾಥ ದೇವಸ್ಥಾನದ್ದು ಎನ್ನಲಾದ 12ನೇ ಶತಮಾನದ ಚೋಳರ ಕಾಳದ ಸೋಮಸ್ಕಂದ ವಿಗ್ರಹ ಮತ್ತು ಕಲ್ಲಕುರಿಚಿ ತಾಲೂಕಿನ ಶಿವ ದೇವಾಲಯಕ್ಕೆ ಸೇರಿದ್ದ. 16ನೇ ಶತಮಾನದ ವಿಜಯನಗರ ಕಾಲದ ಸಂತ ಸಂದರರ್ ಜತೆ ಪರವೈ ವಿಗ್ರಹಗಳು ಇದಾಗಿವೆ.1956ರಿಂದ 1959ರ ಅವಧಿಯಲ್ಲಿ ಈ ವಿಗ್ರಹಗಳು ಭಾರತದ ದೇವಾಲಯಗಳಲ್ಲಿದ್ದ ಫೋಟೋ ಪುರಾವೆಗಳು ಲಭ್ಯವಾಗಿವೆ. ಇವುಗಳನ್ನು ಮಾರಾಟ ಮಾಡುವಾಗ ನಕಲಿ ದಾಖಲೆ ಸೃಷ್ಟಿಸಿ ಮ್ಯೂಸಿಯಂಗೆ ವಂಚಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.