2026-03-07 12:23:34

This Week, Memories Are Sweet Hits The Screens | ಈ ವಾರ ತೆರೆಗೆ ನೆನಪುಗಳ ಮಾತು ಮಧುರ | Speed News Kannada

This Week, Memories Are Sweet Hits The Screens | ಈ ವಾರ ತೆರೆಗೆ ನೆನಪುಗಳ ಮಾತು ಮಧುರ | Speed News Kannada

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ RED & WHITE ಸೆವೆನ್ ರಾಜ್ ನಿರ್ಮಾಣ ಹಾಗೂ ಅಫ್ಜಲ್ ನಿರ್ದೇಶನ .

RED & WHITE  ಸೆವೆನ್ ರಾಜ್ ನಿರ್ಮಾಣದ ಹಾಗೂ ಅಫ್ಜಲ್ ನಿರ್ದೇಶನದ "ನೆನಪುಗಳ ಮಾತುಮಧುರ" ಚಿತ್ರ ಈ ವಾರ(ಫೆಬ್ರವರಿ  6)ರಂದು ತೆರೆಗೆ ಬರಲಿದೆ. 

"ನೆನಪುಗಳ ಮಾತು ಮಧುರ" ಚಿತ್ರದಲ್ಲಿ   ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ.(ANTHOLOGY TYPE)  ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ,  ಹಾರರ್ , ಹಾಸ್ಯ,  ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳು ಇರಲಿದೆ ಎನ್ನುತ್ತಾರೆ ನಿರ್ದೇಶಕ ಅಫ್ಜಲ್. 

ಅಫ್ಜಲ್(ಸೂಪರ್ ಸ್ಟಾರ್ಸ್) ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಗ್ರಹಣ, 
ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ,  ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ ದೇವರಾಜ ಕುಷ್ಟಗಿ ಅವರ ಹಿನ್ನೆಲೆ ಸಂಗೀತವಿದೆ‌

 ನಿರ್ದೇಶಕ ಅಫ್ಜಲ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಸಹ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.