2026-06-08 01:27:11

This Time Russia Targets Ukraine Again: 15 Dead, 7 Injured | ಈ ಸಲದ ರಷ್ಯಾ ಟಾರ್ಗೆಟ್ ಉಕ್ರೇನ್ ಮೇಲೆ ಮತ್ತೆ ದಾಳಿ: 15 ಮಂದಿ ಸಾವು, 7 ಜನರಿಗೆ ಗಾಯ | Speed News Kannada

This Time Russia Targets Ukraine Again: 15 Dead, 7 Injured | ಈ ಸಲದ ರಷ್ಯಾ ಟಾರ್ಗೆಟ್ ಉಕ್ರೇನ್ ಮೇಲೆ ಮತ್ತೆ ದಾಳಿ: 15 ಮಂದಿ ಸಾವು, 7 ಜನರಿಗೆ ಗಾಯ | Speed News Kannada

ಹೊಸದಿಗಂತ ಡಿಜಿಟಲ್ ಡೆಸ್ಕ್ ರಷ್ಯಾ ಉಕ್ರೇನ್ ಮೇಲೆ ಮತ್ತೊಂದು ಡೋನ್ ದಾಳಿ ನಡೆಸಿದೆ. ಗಣಿಗಾರರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಡ್ನಪ್ರೊ ಪ್ರದೇಶದ ಪಾವೋಹ್ರಾದ್ ಜಿಲ್ಲೆಯ ಟೆರ್ನಿವ್ಯಾ ಸಮೀಪ ನಡೆದಿದೆ ಎಂದು ಉಕ್ರೇನ್ ರಾಜ್ಯ ತುರ್ತು
ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಸಾಗುತ್ತಿದ್ದ ಬಸ್ ಮೇಲೆ ಡೋನ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಬೆಂಕಿಗಾಹುತಿಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಅನೇಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಮೊದಲಿಗೆ ಸಾವಿನ ಸಂಖ್ಯೆ 12 ಎಂದು ತಿಳಿಸಲಾಗಿದ್ದರೂ, ನಂತರ ಅದನ್ನು 15ಕ್ಕೆ ಹೆಚ್ಚಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಾಳಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡ ದಾಳಿಯೆಂದು ಖಂಡಿಸಿದ್ದಾರೆ. ಇದೇ ವೇಳೆ ಯುದ್ಧ ಅಂತ್ಯಕ್ಕೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಕುರಿತು ಅವರು ಮಾಹಿತಿ ನೀಡಿದ್ದು, ರಷ್ಯಾ, ಉಕ್ರೇನ್ ಮತ್ತು ಅಮೆರಿಕ ನಡುವಿನ ಮುಂದಿನ ತ್ರಿಪಕ್ಷೀಯ ಸಭೆ ಫೆಬ್ರವರಿ 4 ಮತ್ತು 5ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.