ಮಹಿಳಾ ಪ್ರೀಮಿಯರ್ ಲೀಗ್ (WPL 2026) 193 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 11 ರನ್‌ಗಳಿಂದ ಗುಜರಾತ್ ಜೈಂಟ್ಸ್ ವುಮೆನ್ಸ್ ತಂಡ ಗೆದ್ದು ಬೀಗಿದೆ. ಈ ಮೂಲಕ ಗುಜರಾತ್ ಜೈಂಟ್ಸ್ ತಂಡ ಗ್ರಾಂಡ್ ಆಗಿ ಪ್ಲೇಆಫ್ (Playoff) ಎಂಟ್ರಿ ಕೊಟ್ಟಿದೆವಡೋದರಾದ ಕೊಟಂಬಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆದ WPL ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಟೀಮ್ ನಾಯಕಿ ಆಶ್ಲೀ ಗಾರ್ಡ್ನರ್ (Ashleigh Gardner) ಅವರು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಓಪನರ್ ಆಗಿ ಕ್ರೀಸ್‌ಗೆ ಆಗಮಿಸಿದ ಬೆತ್ ಮೂನಿ 5, ಸೋಫಿಯಾ ಡಿವೈನ್ 25 ರನ್‌ಗೆ ಔಟ್ ಆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮೂಡಿ ಬಂದಿದೆ. ಮುಂಬೈ ತಂಡದ ಯುವತಿಯರು ವಿಕೆಟ್ ಪಡೆಯಲು ಹರಸಾಹಸ ಪಟ್ಟರು. ಆದರೆ ಅನುಷ್ಕಾ ಶರ್ಮಾ 33, ಆಶ್ಲೀ ಗಾರ್ಡ್ನರ್ 46 ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ ಅವರ 4 ಫೋರ್ ಹಾಗೂ 2 ಸಿಕ್ಸರ್‌ಗಳಿಂದ 26 ಬಾಲ್‌ಗಳಿಗೆ 44 ರನ್ ಸಿಡಿಸಿದರು. ಇದರಿಂದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಗೆ 168 ರನ್‌ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಹಿಂದೆ ಬಿದ್ದ ಮುಂಬೈ ಇಂಡಿಯನ್ಸ್ ಟೀಮ್ ಆರಂಭದಲ್ಲಿ 23 ರನ್ ಆಗಿರುವಾಗಲೇ ಓಪನರ್ ಔಟ್ ಆದರು. ಇದಾದ ಮೇಲೆ 33 ರನ್ ಆಗಿದ್ದಾಗ ಮತ್ತೊಂದು ವಿಕೆಟ್ ಉರುಳಿತು. ಆದರೆ ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ಮುಂಬೈ ತಂಡದ ಗೆಲುವಿನ ಕನಸು ಚಿಗುರಿಸಿತ್ತು. T20 ವಿಶ್ವಕಪ್‌ಗೆ ಅಂಪೈರ್‌ಗಳ ಹೆಸರು ಅನೌನ್ಸ್.. ಭಾರತದ ಎಷ್ಟು ಜನರಿಗೆ ಈ ಅದೃಷ್ಟ ಒಲಿದಿದೆ..? ಏಕೆಂದರೆ 48 ಬಾಲ್‌ಗಳಲ್ಲಿ ಕ್ಯಾಪ್ಟನ್ ಹರ್ಮನ್‌ಪ್ರೀತ್ ಅವರು 8 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ 82 ರನ್ ಚಚ್ಚಿದರು. ಆದರೆ ತಂಡದಲ್ಲಿ ಹರ್ಮನ್ ಪ್ರೀತ್ ಅವರಿಗೆ ಸರಿಯಾದ ಪಾರ್ಟನರ್ ಇಲ್ಲದೇ, ಹಾಗೂ ಓವರ್‌ಗಳು ಮುಗಿಯಲು ಬಂದಿದ್ದರಿಂದ ಮುಂಬೈ ತಂಡ ಸೋಲೋಪ್ಪಿಕೊಂಡಿತು. ಕೇವಲ 11 ರನ್‌ಗಳಿಂದ ಹರ್ಮನ್‌ಪ್ರೀತ್ ಪಡೆ ಸೋತಿದೆ. ಇದರಿಂದ ಗುಜರಾತ್ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ.