2026-06-25 02:23:12

Thieves who were stealing mobile phones on a plane have been arrested | ವಿಮಾನದಲ್ಲಿ ಬಂದು ಮೊಬೈಲ್ ಕದಿಯುತ್ತಿದ್ದ ಕಳ್ಳರು ಅರೆಸ್ಟ್ | Speed News Kannada

Thieves who were stealing mobile phones on a plane have been arrested | ವಿಮಾನದಲ್ಲಿ ಬಂದು ಮೊಬೈಲ್ ಕದಿಯುತ್ತಿದ್ದ ಕಳ್ಳರು ಅರೆಸ್ಟ್ | Speed News Kannada

ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ಬೈಕ್‌ನಲ್ಲೋ, ಕಾರನಲ್ಲೋ ಬಂದು ಕನ್ನ ಹಾಕುವ ಸುದ್ದಿ ಕೇಳೀರ್ತೀರಾ. ಆದ್ರೆ ಈ ಕಳ್ಳರು ದುಬಾರಿ ಮೊಬೈಲ್ ಕಳವು  ಮಾಡಲು ಆರೋಪಿಗಳು ವಿಮಾನದಲ್ಲಿ ನಗರಕ್ಕೆ ಆಗಮಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೌದು.. ದೆಹಲಿ ಮೂಲದ ಜಯಚಂದ್ರ ಮತ್ತು ತರುಣ್ ಬಂಧಿತ ಆರೋಪಿಗಳು.ಐಫೋನ್ ಸೇರಿದಂತೆ ದುಬಾರಿ ಬ್ರಾಂಡ್‌ಗಳ ಮೊಬೈಲ್‌ಗಳೇ ಇವರ ಪ್ರಮುಖ ಟಾರ್ಗೆಟ್ ಆಗಿದ್ದವು. ದೊಡ್ಡ ಮಟ್ಟದ ಪಾರ್ಟಿಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಜಾತ್ರೆಗಳಲ್ಲಿ ಪ್ರವೇಶ ಪಡೆದು, ಜನಸಂದಣಿಯ ನಡುವೆ ತಮ್ಮ ಕೈಚಳಕ ತೋರಿಸುತ್ತಿದ್ದರು. ಐಷಾರಾಮಿ ಬಸ್‌ಗಳಲ್ಲೂ ಕಳ್ಳತನ ನಡೆಸುತ್ತಿದ್ದ ಆರೋಪಿಗಳು, ಒಂದೇ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ಒಂದು ಗಂಟೆಯಲ್ಲಿ 14 ಮೊಬೈಲ್‌ ಗಳನ್ನು ಎಗರಿಸಿದ್ದರು ಎನ್ನಲಾಗಿದೆ.
ದೇವನಹಳ್ಳಿ ಸಮೀಪದ ಚನ್ನರಾಯಪಟ್ಟಣದಲ್ಲಿಯೂ ಆರೋಪಿಗಳು ಮೊಬೈಲ್ ಕಳವು ನಡೆಸಿದ್ದರು. ಅಲ್ಲಿಂದ ವೈಟ್ ಫೀಲ್ಡ್ ಕಡೆ ಬಸ್‌ನಲ್ಲಿ ಪ್ರಯಾಣಿಸುವಾಗ ಮತ್ತೊಂದು ಐಫೋನ್ ಕದ್ದಿದ್ದರು. ಕದ್ದ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು ಆರೋಪಿಗಳ ಹಾದಿ ಹಿಡಿದು ಬೆನ್ನಟ್ಟಿದಾಗ, ಲಾಡ್ಜ್ ಒಂದರಲ್ಲಿ ಮೊಬೈಲ್ ಪರಿಶೀಲಿಸುತ್ತಿದ್ದ ವೇಳೆ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 10 ಲಕ್ಷ ರೂ. ಮೌಲ್ಯದ 14 ದುಬಾರಿ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಕಳವು ಮಾಡುವ ಉದ್ದೇಶದಿಂದಲೇ ದೆಹಲಿಯಿಂದ ನಗರಕ್ಕೆ ವಿಮಾನದಲ್ಲಿ ಬರುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಅಪಾರ್ಟೆಂಟ್ ನಲ್ಲಿ ಡ್ರಗ್ಸ್ ಸೀಜ್ ಹೋಳಿ ಹಬ್ಬದ ಸಂದರ್ಭವೇ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು  ವಶಪಡಿಸಿಕೊಂಡಿದ್ದಲ್ಲದೇ ಒಬ್ಬ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬಾಲಗಲೂರಿನಲ್ಲಿ ನಡೆದಿದೆ. ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟೆಂಟ್ ನಲ್ಲಿಯೇ ಪೊಲೀಸರು ಅಪಾರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬಾಗಲೂರಿನ ಪ್ರೆಸ್ಕ್ರಿಜ್ ಫೈನ್ ಬೇರಿ ಪಾರ್ಕ್ ನ ಪ್ಲಾಟ್ ಮಾದಕ ವಸ್ತು ಪತ್ತೆಯಾಗಿದೆ. 10 ಕೋಟಿ ರೂ. ಮೌಲ್ಯದ ಎಲ್‌ಎಸ್‌ಡಿ, ಹೈಡೋ ಗಾಂಜಾ, ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೇರಳ ಮೂಲದ ಅಶ್ವಿನ್ (27) ಹಾಗೂ ಮೊಬಿನಾ (25) ಹೆಸರಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.