2026-06-25 02:06:37

Thieves steal ticket machine in Majestic | ಮೆಜೆಸ್ಟಿಕ್‌ನಲ್ಲಿ ಟಿಕೆಟ್‌ ಮಷೀನ್ ಕದ್ದ ಕಳ್ಳರು ಪ್ರಯಾಣಿಕರು ಸಿಬ್ಬಂದಿ ಪರದಾಟ | Speed News Kannada

Thieves steal ticket machine in Majestic | ಮೆಜೆಸ್ಟಿಕ್‌ನಲ್ಲಿ ಟಿಕೆಟ್‌ ಮಷೀನ್ ಕದ್ದ ಕಳ್ಳರು ಪ್ರಯಾಣಿಕರು ಸಿಬ್ಬಂದಿ ಪರದಾಟ | Speed News Kannada

ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಹೈರಾಣಾದ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ನಾನ್ ಎಸಿ ಸ್ವೀಪರ್ ಬಸ್‌ನ ಟಿಕೆಟ್ ಮಷೀನ್‌ನ್ನು ಖದೀಮರು ಕದ್ದೊಯ್ದಿದ್ದಾರೆ.ಕಂಡಕ್ಟರ್ ಮತ್ತು ಡ್ರೈವರ್ ಅವರ ಬ್ಯಾಗ್ ಸಮೇತ ಖದೀಮರು ಹೊತ್ತೊಯ್ದಿದ್ದು, ಆ ಬ್ಯಾಗ್‌ನಲ್ಲಿ ಟಿಕೆಟ್ ಮಷೀನ್ ಇತ್ತು ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಬಸ್‌ ಸೇವೆ ಆರಂಭವಾಗದೆ ಎರಡು-ಮೂರು ಗಂಟೆಗಳ ಕಾಲ ಮೆಜೆಸ್ಟಿಕ್‌ನಲ್ಲೇ ಪ್ರಯಾಣಿಕರು ಪರದಾಡುವಂತಾಯಿತು.
ಟಿಕೆಟ್ ಮಷೀನ್ ಇಲ್ಲದ ಕಾರಣ ಕೆಎಸ್‌ಆರ್‌ಟಿಸಿ ಬಸ್ ತಡರಾತ್ರಿವರೆಗೂ ನಿಂತಲ್ಲೇ ನಿಂತಿತ್ತು. ಬಳಿಕ ಸಿಬ್ಬಂದಿಗಳು ಮ್ಯಾನುಯಲ್ ಟಿಕೆಟ್ ನೀಡಿ ಬಸ್ ಸೇವೆಯನ್ನು ಆರಂಭಿಸಿದರು. ಆದರೆ ಈ ವಿಳಂಬದಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು.ಖದೀಮರು ಬ್ಯಾಗ್ ಹೊತ್ತೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.