2026-06-08 02:43:07

The war will end only if Iran agrees to these three conditions | ಈ ಮೂರು ನಿಯಮಗಳನ್ನು ಒಪ್ಪಿದರೆ ಮಾತ್ರ ಯುದ್ಧ ಅಂತ್ಯ ಇರಾನ್ | Speed News Kannada

The war will end only if Iran agrees to these three conditions | ಈ ಮೂರು ನಿಯಮಗಳನ್ನು ಒಪ್ಪಿದರೆ ಮಾತ್ರ ಯುದ್ಧ ಅಂತ್ಯ ಇರಾನ್ | Speed News Kannada

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ ಈ ಮೂರು ಷರತ್ತುಗಳಿಗೆ ಒಪ್ಪಿದರೆ ಮಾತ್ರ ಯುದ್ಧ ಅಂತ್ಯ: ಇರಾನ್ ಒಂದು ಸಾಲಿನಲ್ಲಿ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ.
ಪ್ರಮುಖ ಸಂಗತಿಗಳು; ಇರಾನ್‌ನ ಮೂರು ಪ್ರಮುಖ ಷರತ್ತುಗಳುಹಕ್ಕುಗಳ ಮಾನ್ಯತೆ, ಯುದ್ಧ ಹಾನಿಗೆ ಪರಿಹಾರ ಮತ್ತು ಭವಿಷ್ಯದಲ್ಲಿ ದಾಳಿ ನಡೆಸುವುದಿಲ್ಲ ಎಂಬ ಖಾತರಿಯನ್ನು ಅಮೆರಿಕ ಹಾಗೂ ಇಸ್ರೇಲ್ ನೀಡಬೇಕು ಎಂದು ಇರಾನ್ ಆಗ್ರಹಿಸಿದೆ; ಪ್ರಾದೇಶಿಕ ಶಾಂತಿಗೆ ಬದ್ಧತೆ ತಮ್ಮ ದೇಶದ ನಿಲುವನ್ನು ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಚರ್ಚಿಸಿರುವ ಇರಾನ್ ಅಧ್ಯಕ್ಷರು, ಪ್ರಾದೇಶಿಕ ಶಾಂತಿಯನ್ನು ಕಾಪಾಡಲು ತಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಟೆಹರಾನ್: 'ನಮ್ಮ ಮೂರು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಸಂಘರ್ಷವನ್ನು ಅಂತ್ಯಗೊಳಿಸುತ್ತೇವೆ' ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯಾನ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, 'ಪ್ರಾದೇಶಿಕ ಶಾಂತಿಯನ್ನು ಕಾಪಾಡಲು ಇರಾನ್ ಬದ್ದವಾಗಿದೆ' ಎಂದು ಹೇಳಿದ್ದಾರೆ.
'ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ನಮ್ಮ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಇರಾನ್‌ನ ಕಾನೂನುಬದ್ದ ಹಕ್ಕುಗಳನ್ನು ಗುರುತಿಸುವುದು, ಯುದ್ದದಿಂದ ಉಂಟಾದ ಹಾನಿಗೆ ಪರಿಹಾರವನ್ನು ಪಾವತಿಸಿವುದು ಮತ್ತು ಭವಿಷ್ಯದಲ್ಲಿ ತಮ್ಮ ದೇಶದ ಮೇಲೆ ಯಾವುದೇ ದಾಳಿಗಳು ನಡೆಸುವುದಿಲ್ಲ ಎಂಬ ಖಾತರಿ ಸಿಕ್ಕಿದರೆ ಮಾತ್ರ ಯುದ್ಧವನ್ನು ಅಂತ್ಯಗೊಳಿಸುತ್ತೇವೆ' ಎಂದು ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.