2026-04-23 04:57:16

The government has given a big shock to liquor lovers | ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದ ಸರ್ಕಾರ, ದರದಲ್ಲಿ ಶೇ.20ರಷ್ಟು ಏರಿಕೆ ಸಾಧ್ಯತೆ | Speed news kannada

The government has given a big shock to liquor lovers | ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದ ಸರ್ಕಾರ, ದರದಲ್ಲಿ ಶೇ.20ರಷ್ಟು ಏರಿಕೆ ಸಾಧ್ಯತೆ | Speed news kannada

ರಾಜ್ಯದ ಮದ್ಯ ಪ್ರಿಯರಿಗೆ ಶೀಘ್ರದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಲಿದೆ. ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದ್ದು, ಗಾತ್ರದ ಬದಲಿಗೆ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ “Alcohol-in-Beverage (AIB-ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ)” ನೀತಿಯನ್ನು ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲ್‌ನಲ್ಲಿ ಇರುವ ನಿಜವಾದ ಆಲ್ಕೋಹಾಲ್ ಅಂಶವನ್ನು ಆಧರಿಸಿ ತೆರಿಗೆ ನಿಗದಿಯಾಗಲಿದೆ. ಅಂದರೆ, ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯವಾಗಿ ಬಳಕೆಯಾಗುವ ಕಡಿಮೆ ಬೆಲೆಯ ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಸೇರಿದಂತೆ ಭಾರತೀಯ ಮದ್ಯದ ದರಗಳು ಶೇ.20ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.

ಈ ನೀತಿಯ ಪರಿಣಾಮವಾಗಿ ಕಡಿಮೆ ಬೆಲೆಯ ಮದ್ಯವು ಹೆಚ್ಚು ಪರಿಣಾಮಕ್ಕೊಳಗಾಗಲಿದೆ. ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿ ಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ. ಒಟ್ಟಿನಲ್ಲಿ, ಸರ್ಕಾರದ ಹೊಸ AIB ತೆರಿಗೆ ನೀತಿ ಜಾರಿಯಾದರೆ ರಾಜ್ಯದಲ್ಲಿ ಮದ್ಯದ ಬೆಲೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸುವುದು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.