2026-03-07 05:17:03

The ex wife of Amazon owner Jeff Bezos who donated 2 lakh crore | ಬರೋಬ್ಬರಿ 2 ಲಕ್ಷ ಕೋಟಿ ದಾನ ಮಾಡಿದ ಅಮೆಜಾನ್ ಮಾಲೀಕ ಜೆಫ್ ಬೆಜೋಸ್‌ನ ಮಾಜಿ ಪತ್ನಿ | Speed News Kannada

The ex wife of Amazon owner Jeff Bezos who donated 2 lakh crore | ಬರೋಬ್ಬರಿ 2 ಲಕ್ಷ ಕೋಟಿ ದಾನ ಮಾಡಿದ ಅಮೆಜಾನ್ ಮಾಲೀಕ ಜೆಫ್ ಬೆಜೋಸ್‌ನ ಮಾಜಿ ಪತ್ನಿ | Speed News Kannada

ಅಮೆಜಾನ್‌ ಮುಖ್ಯಸ್ಥ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ ಮೆಕೆಂಝಿ ಸ್ಕಾಟ್‌ ಕಳೆದ 7 ವರ್ಷಗಳಲ್ಲಿ ಬರೋಬ್ಬರಿ 2.3 ಲಕ್ಷ ಕೋಟಿ ರೂ.ಗಳನ್ನು ಹಲವು ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ಈ ಮೂಲಕ ಅವರು ವಿಶ್ವದ 3ನೇ ಅತಿದೊಡ್ಡ ದಾನಿ ಎಂಬ ಖ್ಯಾತಿಗೆ ಪಾತ್ರರಾಗದ್ದಾರೆ.ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯಂತ ಸಕ್ರಿಯ ದಾನಿಗಳಲ್ಲಿ ಒಬ್ಬರಾದ ಸ್ಮಾಟ್, 2020 ರಿಂದ ಸುಮಾರು 58 ಮಿಲಿಯನ್ ಅಮೆಜಾನ್ ಷೇರುಗಳನ್ನು ದಾನ ಮಾಡಿದ್ದಾರೆ. 2019 ರಲ್ಲಿ ಬೆಜೋಸ್‌ನಿಂದ ವಿಚ್ಚೇದನದ ನಂತರ ಅವರು ಪಡೆದ ಪಾಲನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ.
ವಿಚ್ಛೇದನದ ನಂತರ, ಸ್ಕಾಟ್ ಅಮೆಜಾನ್‌ನಲ್ಲಿ ಸರಿಸುಮಾರು 4% ಪಾಲನ್ನು ಪಡೆದರು. ಆ ಸಮಯದಲ್ಲಿ ಸುಮಾರು 139 ಮಿಲಿಯನ್ ಷೇರುಗಳಷ್ಟಿತ್ತು. ಫೋರ್ಟ್ಸ್ ವರದಿಯ ಪ್ರಕಾರ, ಕಳೆದ 7 ವರ್ಷಗಳಿಂದ ಸ್ಮಾಟ್ ಅಮೆಜಾನ್‌ನಲ್ಲಿದ್ದ ತಮ್ಮ ಷೇರುಗಳ ಪೈಕಿ 75% ರಷ್ಟು ದಾನ ನೀಡಿದ್ದಾರೆ.
ಕಳೆದ ಒಂದು ವರ್ಷದಲ್ಲಿಯೇ 65,295 ಕೋಟಿ ರೂ. ದಾನ ನೀಡಿದ್ದಾರೆ. ಇದರೊಂದಿಗೆ ವರ್ಷವೊಂದರಲ್ಲಿ ವ್ಯಕ್ತಿಯೊಬ್ಬರು ದಾನ ನೀಡಲಾದ ಅತಿದೊಡ್ಡ ಮೊತ್ತ ಇದಾಗಿದೆ. ಇದಲ್ಲದೇ ಈ ದಾನಗಳಿಂದ ಸ್ಕಾಟ್ ವಿಶ್ವದ ಅಗ್ರ ಶ್ರೀಮಂತ ಎಲಾನ್ ಮಸ್ಕ್ ಅವರಿಗಿಂತಲೂ ಹೆಚ್ಚಿನ ಪ್ರಮಾಣದ ದಾನ ನೀಡಿದ್ದಾರೆ ಎನ್ನಲಾಗಿದೆ.
ಅವರ ಲೋಕೋಪಕಾರಿ ಸಂಸ್ಥೆಯಾದ ಯೀಲ್ಡ್ ಗಿವಿಂಗ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಸ್ಕಾಟ್ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತೀವ್ರ ಆರ್ಥಿಕವಾಗಿ ಹಿಂದುಳಿದಿದ್ದರು. ಆಗ ತಮ್ಮ ವಿದ್ಯಾಭ್ಯಾಸಕ್ಕೆ ಹಾಗೂ ದಂತ ಚಿಕಿತ್ಸೆಗಾಗಿ ತಮ್ಮ ಕಾಲೇಜು ರೂಮ್‌ ಮೇಟ್‌ನಿಂದ ಹಣವನ್ನು ಎರವಲು ಪಡೆದದ್ದರು. ಆ ಘಟನೆಗಳನ್ನು ಅವರು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದರು ಎಂದು ತಿಳಿಸಿದ್ದಾರೆ.ಕಾಲೇಜಿನಲ್ಲಿ ನನ್ನ ಮುರಿದ ಹಲ್ಲನ್ನು ಸರಿಪಡಿಸಲು ನನಗೆ ಉಚಿತ ದಂತ ಚಿಕಿತ್ಸೆಯನ್ನು ನೀಡಿದ್ದು ಸ್ಥಳೀಯ ದಂತವೈದ್ಯರು. ನಾನು ಕಷ್ಟದ ಸಂದರ್ಭ ಅಳುತ್ತಿರುವುದನ್ನು ಕಂಡ ಕಾಲೇಜು ರೂಮ್‌ಮೇಟ್, ನನ್ನ ಎರಡನೇ ವರ್ಷದಲ್ಲಿ ಕಾಲೇಜು ಬಿಡದಂತೆ ತಡೆಯಲು ಸಾವಿರ ಡಾಲರ್‌ಗಳನ್ನು ಸಾಲವಾಗಿ ನೀಡಿದ್ದರು. ಅವರ ಆ ನಿಸ್ವಾರ್ಥ ಸಹಾಯವೇ ಇಂದು ನಾನು ದಾನಿಯಾಗಲು ಕಾರಣ ಎಂದು ಅವರು ವಿವರಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.