2026-06-08 01:26:03

The 39 year old actress finally got her Man | 39 ವರ್ಷದ ನಟಿಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ ಬಿಗ್ ಬಾಸ್ ಚೆಲುವೆಯ ಹೃದಯ ಗೆದ್ದ ಹುಡುಗ ಯಾರು | Speed News Kannada

The 39 year old actress finally got her Man | 39 ವರ್ಷದ ನಟಿಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ ಬಿಗ್ ಬಾಸ್ ಚೆಲುವೆಯ ಹೃದಯ ಗೆದ್ದ ಹುಡುಗ ಯಾರು | Speed News Kannada

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಕೂಡ ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಉದಾಹರಣೆಗೆ ಪವಿತ್ರಾ ಪುನಿಯಾ. ಹೌದು, ಪವಿತ್ರಾ ಪುನಿಯಾ.. ಹಿಂದಿ ಕಿರುತೆರೆಯ ಖ್ಯಾತ ಹೆಸರು. "ಯೇ ಹೈ ಮೊಹಬ್ಬತ್ತೇ"... "ನಾಗಿನ್ 3".. "ಲವ್ ಯೂ ಜಿಂದಗಿ".. "ಡಾಯನ್".. "ಇಶ್ ಕೀ ದಾಸ್ತಾನ್".. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಪವಿತ್ರಾ ಪುನಿಯಾ "ಬಿಗ್ ಬಾಸ್-14"ರ ಸ್ಪರ್ಧಿ ಕೂಡ ಹೌದು.
ಇಂಥಾ ಪವಿತ್ರಾ ಪುನಿಯಾ 2015ರಲ್ಲಿ ಸುಮಿತ್ ಮಹೇಶ್ವರಿ ಜೊತೆ ಮದುವೆಯಾಗಬೇಕಿತ್ತು. ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ.. ಆ ನಂತರ ಅದೇನಾಯ್ತು ಗೊತ್ತಿಲ್ಲ. ಈ ಸಂಬಂಧ ಮುರಿದು ಬಿತ್ತು.
ಮದುವೆ ಮುರಿದು ಬಿದ್ದು 5 ವರ್ಷಗಳ ನಂತರ ಅಂದರೆ 2020ರಲ್ಲಿ ಸುಮಿತ್ ಏಕಾಏಕಿ ಪವಿತ್ರಾ ಪುನಿಯಾ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ರಹಸ್ಯವಾಗಿ ಮದುವೆಯಾಗಿತ್ತು ಎಂದು ಬಾಂಬ್ ಎಸೆದಿದ್ದರು. ಆ ನಂತರ ಈಜಾಜ್ ಖಾನ್ ಜೊತೆ ಪವಿತ್ರಾ ಪುನಿಯಾ ಪ್ರೀತಿಯಲ್ಲಿ ಬಿದ್ದರು. "ಬಿಗ್ ಬಾಸ್ ಸೀಸನ್ 14" ಇವರ ಪ್ರೇಮಕ್ಕೆ ಬುನಾದಿ ಹಾಕಿತ್ತು. ಆರಂಭದ ದಿನಗಳಲ್ಲಿ "ಬಿಗ್ ಬಾಸ್'ನಲ್ಲಿ ಇಬ್ಬರು ದಿನ ನಿತ್ಯ ಜಗಳವೂ ಆಡಿದರು. ಆದರೆ ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹೀಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ ಇಬ್ಬರು ಒಂದಲ್ಲ, ಎರಡಲ್ಲ.. ನಾಲ್ಕು ವರ್ಷ ಜೊತೆಯಲ್ಲಿದ್ದರು. ಓಡಾಡಿದರು. ಎಲ್ಲರೆದುರು ತಮ್ಮ ಪ್ರೀತಿಯನ್ನು ಕೂಡ ಒಪ್ಪಿಕೊಂಡರು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಇವರ ಸಂಬಂಧ ಮುರಿದು ಬಿತ್ತು.
ಈಜಾಜ್ ಖಾನ್ ಮತ್ತು ಪವಿತ್ರ ಪುನಿಯಾ ದೂರವಾದ ನಂತರ, ಹಲವರು.. ಇವರ ಪ್ರೀತಿಗೆ ಧರ್ಮ ಅಡ್ಡಿಯಾಯ್ತು ಎಂದು ಮಾತನಾಡಿದರು. ಈ ಮಾತುಗಳನ್ನು ಈಜಾಜ್ ಖಾನ್ ಆಗಲಿ ಪವಿತ್ರಾ ಪುನಿಯಾ ಆಗಲಿ ಒಪ್ಪಿಕೊಂಡಿಲ್ಲವಾದರೂ ಪವಿತ್ರಾ ಮಾತನಾಡಿದ ಮಾತುಗಳು ಪರೋಕ್ಷವಾಗಿ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದ್ದವು. ಆ ನಂತರ ಪಾರಸ್ ಛಾಬ್ರಾ ಮತ್ತು ಪ್ರತೀಕ್ ಸೆಹಜ್‌ಪಾಲ್ ಅವರ ಜೊತೆ ಕೂಡ ಇವರ ಹೆಸರು ಥಳುಕು ಹಾಕಿಕೊಂಡಿತ್ತು. ಹೀಗೆ ಪ್ರೀತಿಯಲ್ಲಿ ನಾಲ್ಕು ಬಾರಿ ಎದ್ದು ಬಿದ್ದು ನೊಂದು ಬೆಂದು ಹೋದ ಪವಿತ್ರಾ ಪುನಿಯಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದರು. ತಮ್ಮ ಕೈ ಹಿಡಿಯುತ್ತಿರುವ ಹುಡುಗನ ಹೆಸರಾಗಲಿ.. ಹುಡುಗನ ಹಿನ್ನೆಲೆಯಾಗಲಿ.. ಯಾರಿಗೂ ಹೇಳದೇ ಗೌಪ್ಯವಾಗಿ ಇಟ್ಟಿದ್ದ ಪವಿತ್ರಾ ಪುನಿಯಾ 'ಹಿಂದೂಸ್ತಾನ್ ಟೈಮ್ಸ್"ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಹೊಸ ಆರಂಭದ ಕುರಿತು ಮಾತನಾಡಿದ್ದರು.ನನ್ನ ಭಾವಿ ಪತಿ ಒಬ್ಬ ಉದ್ಯಮಿ, ನಟರಲ್ಲ ಎಂದು ಮಾತ್ರ ಹೇಳಿದ್ದರು. ಉಳಿದ ವಿಚಾರಗಳನ್ನು ಹಂಚಿಕೊಳ್ಳಳು ನಿರಾಕರಿಸಿದ್ದರು. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.