2026-03-07 01:42:55

Thalapathy Vijays wife Sangeeta files for divorce | ದಳಪತಿ ವಿಜಯ್‌ ಪತ್ನಿ ಸಂಗೀತಾ ಡೈವೋರ್ಸ್‌ ಗೆ ಅರ್ಜಿ ಬಿರುಕಿಗೆ ಆ ನಟಿ ಕಾರಣವೇ | Speed News Kannada

Thalapathy Vijays wife Sangeeta files for divorce | ದಳಪತಿ ವಿಜಯ್‌ ಪತ್ನಿ ಸಂಗೀತಾ ಡೈವೋರ್ಸ್‌ ಗೆ ಅರ್ಜಿ ಬಿರುಕಿಗೆ ಆ ನಟಿ ಕಾರಣವೇ | Speed News Kannada

ಖ್ಯಾತ ಕಾಲಿವುಡ್ ನಟ, ಈಗಷ್ಟೇ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರುವ  ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಜಯ್ ಪತ್ನಿ ಸಂಗೀತಾ ಅವರು 27 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 
ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಜಯ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಧ್ಯ ರಾಜಕೀಯದಲ್ಲಿ ನೆಲೆಯೂರಲು ಹವಣಿಸುತ್ತಿರುವ ವಿಜಯ್ ಅವರಿಗೆ ತಮ್ಮ ಮೇಲಿನ ಆರೋಪ ಕಪ್ಪುಚುಕ್ಕಿಯಾಗಲಿದೆಯೇ ಎಂದು ಕಾದುನೋಡಬೇಕಿದೆ.
ಸಂಗೀತಾ ಲಂಡನ್‌ನಲ್ಲಿ ಹುಟ್ಟಿ ಬೆಳೆದವರು ಅವರ ತಂದೆ ಸೊನ್ನಲಿಂಗಂ ಲಂಡನ್‌ನಲ್ಲಿ ದೊಡ್ಡ ಉದ್ಯಮಿಯಾಗಿದ್ದರು. 1996 ರಲ್ಲಿ, 'ಪೂವೆ ಉನಕ್ಕ' ಚಿತ್ರವು ಭಾರಿ ಯಶಸ್ಸನ್ನು ಕಂಡಾಗ. ಸಂಗೀತಾ ಲಂಡನ್‌ ನಿಂದ ಆಗಮಿಸಿ ವಿಜಯ್ ಅವರನ್ನು ಭೇಟಿಯಾಗಿದ್ದರು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ 1999 ರಲ್ಲಿ ವಿವಾಹವಾಗಿದ್ದರು.  ವಿಜಯ್‌ ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 
ವಿಜಯ್‌ ಕ್ರಿಶ್ಚಿಯನ್.‌ ಸಂಗೀತಾ ಹಿಂದೂ. ಆದರೂ ಎರಡೂ ಕುಟುಂಬದವರು ಒಪ್ಪಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. 
2024 ರಿಂದಲೂ ವಿಜಯ್-ಸಂಗೀತಾ ವಿಚ್ಛೇದನದ ಗಾಳಿಸುದ್ದಿ ಹರಿದಾಟುತ್ತಲೇ ಇತ್ತು. ಈಗ ಅಧಿಕೃತವಾಗಿ ಹೊರಬಿದ್ದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.