2026-03-07 12:20:57

Thalapathy Says Goodbye to Acting | ಆಕ್ಟಿಂಗ್‌ಗೆ ಗುಡ್‌ಬೈ ಹೇಳಿದ ದಳಪತಿ | Speed News Kannada

Thalapathy Says Goodbye to Acting | ಆಕ್ಟಿಂಗ್‌ಗೆ ಗುಡ್‌ಬೈ ಹೇಳಿದ ದಳಪತಿ | Speed News Kannada

ಚೆನ್ನೈ, ಜನವರಿ 27: ತಮಿಳುನಾಡು ಚಿತ್ರರಂಗದ ದಳಪತಿ ವಿಜಯ್ ನಟಿಸಿರುವ 69ನೇ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾಯುತ್ತ ಕುಳಿತ್ತದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 
ಜನವರಿ 9ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಈಗ ಕೋರ್ಟ್ ಅಂಗಳದಲ್ಲಿ ಸಿಲುಕಿ ಒದ್ದಾಡ್ತಿದೆ. ಇಂದು ಮದ್ರಾಸ್ ಹೈಕೋರ್ಟ್  ನೀಡಿರೋ ತೀರ್ಪು ನಿರ್ಮಾಪಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಹಿಂದೆ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ, ಸೆನ್ಸಾರ್ ಮಂಡಳಿಗೆ ತರಾಟೆಗೆ ತೆಗೆದುಕೊಂಡು ತಕ್ಷಣವೇ ಸಿನಿಮಾಗೆ ಸರ್ಟಿಫಿಕೇಟ್ ಕೊಡಿ ಅಂತ ಆರ್ಡರ್ ಮಾಡಿತ್ತು. ಇದ್ರಿಂದ ಫ್ಯಾನ್ಸ್ ಫುಲ್ ಖುಷಿಯಾಗಿದ್ರು. ಆದ್ರೆ ಇಂದು ಈ ಆದೇಶವನ್ನ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಸಿಂಗಲ್ ಜಡ್ಜ್ ಕೊಟ್ಟಿದ್ದ ತೀರ್ಪು ಸಿಂಧುವಲ್ಲ ಎಂದು ಹೇಳಿರೋದು ಕೆವಿಎನ್ ಪ್ರೊಡಕ್ಷನ್ಸ್‌ಗೆ  ದೊಡ್ಡ ಹೊಡೆತ ಬಿದ್ದಂತಾಗಿದೆ. 
ದಳಪತಿ ವಿಜಯ್ ರಾಜಕೀಯಕ್ಕೆ ಬರೋದಕ್ಕೂ ಮುಂಚೆ ಬರ್ತಿರೋ ಚಿತ್ರ ಆಗಿರೋದ್ರಿಂದ ನಿರೀಕ್ಷೆ ಬೆಟ್ಟದಷ್ಟಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. 500 ಕೋಟಿಗೂ ಹೆಚ್ಚು ಬಂಡವಾಳ ಹಾಕಿರೋ ನಿರ್ಮಾಪಕರು ಈಗ ದಿಕ್ಕೆಟ್ಟು ಕೂತಿದ್ದಾರೆ. ಜನನಾಯಕನ್‌ ಆಗಿ ವಿಜಯ್ ದಳಪತಿ ಯಾವಾಗ ಥಿಯೇಟರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.