2026-07-23 10:27:08

Terrorist massacre in Pakistan Lashkar commander shot dead|ಪಾಕಿಸ್ತಾನದಲ್ಲಿ ಉಗ್ರರ ಹತ್ಯಾಕಾಂಡ ಲಷ್ಕರ್ ಕಮಾಂಡರ್ ಗುಂಡಿಕ್ಕಿ ಹತ್ಯೆ|Speed News Kannada

Terrorist massacre in Pakistan Lashkar commander shot dead|ಪಾಕಿಸ್ತಾನದಲ್ಲಿ ಉಗ್ರರ ಹತ್ಯಾಕಾಂಡ ಲಷ್ಕರ್ ಕಮಾಂಡರ್ ಗುಂಡಿಕ್ಕಿ ಹತ್ಯೆ|Speed News Kannada

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಯೋಜಿತ 'ಟಾರ್ಗೆಟೆಡ್ ಕಿಲ್ಲಿಂಗ್' ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

2023 ರಿಂದ ಆರಂಭವಾದ ಈ ಗುಪ್ತ ಹತ್ಯೆಗಳು 2026ರಲ್ಲಿ ತೀವ್ರಗೊಂಡಿವೆ. ಕೇವಲ ಈ ವರ್ಷವೊಂದರಲ್ಲೇ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಸುಮಾರು 30 ಉಗ್ರರನ್ನು ಪಾಕಿಸ್ತಾನದ ವಿವಿಧೆಡೆ ಹತ್ಯೆ ಮಾಡಲಾಗಿದೆ.ಈ ಹಿಂದೆ ಅಮೀರ್ ಹಮ್ಜಾ, ತಾಹಿರ್ ಅನ್ವರ್ ಮತ್ತು ಕತಲ್ ಸಿಂಧಿಯಂತಹ ಉನ್ನತ ಉಗ್ರರು ನಿಗೂಢವಾಗಿ ಹತರಾಗಿದ್ದಾರೆ.

ಪಾಕಿಸ್ತಾನದ ನೆಲದಲ್ಲಿ ಆಶ್ರಯ ಪಡೆದಿದ್ದ ಉಗ್ರರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿರುವುದು ಮತ್ತು 'ಅಪರಿಚಿತ ಬಂದೂಕುಧಾರಿಗಳ' ಸುಳಿವು ಸಿಗದಿರುವುದು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರಿ ಸವಾಲಾಗಿ ಪರಿಣಮಿಸಿದೆ.ಮುಂಬೈ ಹಾಗೂ ರಿಯಾಸಿ ದಾಳಿಯ ರೂವಾರಿಗಳಿಗೆ ಆಪ್ತರಾಗಿದ್ದವರು ಹತ್ಯೆಯಾಗುತ್ತಿರುವುದರಿಂದ, ಪಾಕಿಸ್ತಾನದ ನೆಲವೇ ಇನ್ನು ಸುರಕ್ಷಿತವಲ್ಲ ಎಂಬ ಭಯ ಉಗ್ರ ಸಂಘಟನೆಗಳಲ್ಲಿ ಮನೆ ಮಾಡಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.