ಬೆಂಗಳೂರು : ಕೇರಳದಲ್ಲಿ ಡ್ರಗ್ ಜಾಲವೊಂದನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೆ. ನಾಲ್ಕು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್ ಮೂಲಕ ಮಾರಾ ಜಾಲ ನಿರ್ವಹಿಸುತ್ತಿದ್ದರು.
ಡ್ರಗ್ ಮಾರಾಟ ಮಾಡುತ್ತಿದ್ದವರು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳೇ ಮುಖ್ಯ ಗ್ರಾಹಕರು, ಹಾಗೂ ಮಾರಾಟ ಮಾಡುತ್ತಿದ್ದಂತ ಸ್ಥಳ ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ಹಲವೆಡೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ ಪೆಡ್ಲರ್‌ಗಳು ಒಂದೇ ತಂಡವಾಗಿದ್ದು ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಹೋದ ಪೆಡ್ಲರ್‌ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಕೆಲವೊಮ್ಮೆ ಕೊಲೆ ಮಾಡುವ ಹಂತದವರೆಗೆ ಜಗಳ ತಲುಪಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಶಕ್ಕೆ ಪಡೆದ ಡ್ರಗ್ ಪೆಡ್ಲರ್ಗಳಲ್ಲಿ ಇಬ್ಬರು ಕರ್ನಾಟಕದವರು, ಒಬ್ಬ ಆಂಧ್ರ, ಮತ್ತು ಉಳಿದ 7 ಜನ ಕೇರಳದವರು. ಸದ್ಯಕ್ಕೆ ಪೊಲೀಸರ ವಶಕ್ಕೆ ಬಂದಿಯಾಗಿದ್ದಾರೆ